ಅಮೆರಿಕದಲ್ಲಿ ನಿಲ್ಲದ ಭಾರತೀಯರ ಮೇಲಿನ ಹಲ್ಲೆ, ಸಿಖ್ ಕ್ಯಾಬ್ ಚಾಲಕನ ಮೇಲೆ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

America--01-Cab

ನ್ಯೂಯಾರ್ಕ್, ಏ.18- ಜನಾಂಗೀಯ ದ್ವೇಷದ ಪ್ರಕರಣಗಳು ಅಮೆರಿಕದಲ್ಲಿ ಮುಂದುವರಿಯುತ್ತಲೇ ಇದ್ದು, ಕೆಲವು ಪಾನಮತ್ತ ಪ್ರಯಾಣಿಕರು ಭಾರತ ಮೂಲದ ಸಿಖ್ ಕ್ಯಾಬ್ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ ಅವನ ಪೇಟ (ಟರ್ಬನ್) ಕಿತ್ತುಕೊಂಡಿರುವ ಘಟನೆ ನ್ಯೂಯಾರ್ಕ್‍ನಲ್ಲಿ ನಡೆದಿದೆ. ಪಂಜಾಬ್ ಮೂಲದ ಹರ್ಕಿರಾತ್ ಸಿಂಗ್ ಎಂಬ ವ್ಯಕ್ತಿ ಭಾನುವಾರ ಬೆಳಗ್ಗೆ ತನ್ನ ಕ್ಯಾಬ್‍ನಲ್ಲಿ ಕೆಲವು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ. ಈ ಸಂದರ್ಭ ಕ್ಯಾಬ್‍ನಲ್ಲಿದ್ದ ಕೆಲವು ಪಾನಮತ್ತ ಅಮೆರಿಕನ್ನರು ಸಿಂಗ್‍ನನ್ನು ನಿಂದಿಸಿ ಹಲ್ಲೆ ನಡೆಸಿ ಅವನ ರುಮಾಲನ್ನು ಕಿತ್ತುಕೊಂಡಿದ್ದಾರೆ. ಇದರಿಂದ ಹೆದರಿದ ಹರ್ಕಿರಾತ್‍ಸಿಂಗ್ ಪೊಲೀಸರಿಗೆ ದೂರು ನೀಡಿದ್ದು, ನನಗೆ ಇಲ್ಲಿ ಇರಲು ಭಯವಾಗುತ್ತಿದೆ, ಇಲ್ಲಿ ಕೆಲಸ ಮಾಡಲಾಗುತ್ತಿಲ್ಲ, ನನಗೆ ರಕ್ಷಣೆ ಕೊಡಿ. ಪ್ರಯಾಣಿಕರು ಮಾಡಿದ ಈ ಕೃತ್ಯದಿಂದ ನನ್ನ ಸಮುದಾಯಕ್ಕೆ ಅವಮಾನವಾಗಿದೆ ಎಂದು ತಿಳಿಸಿದ್ದಾನೆ.



ಪ್ರಕರಣ ದಾಖಲಿಸಿಕೊಂಡಿರುವ ನ್ಯೂಯಾರ್ಕ್ ಪೊಲೀಸರು ಅಪರಾಧಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಇದೇನು ಜನಾಂಗೀಯ ದ್ವೇಷದ ಪ್ರಕರಣವೇ ಅಥವಾ ಪಾನಮತ್ತರಾಗಿ ಮಾಡಿರುವ ಕೃತ್ಯವೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin