ಎಕನಾಮಿಕ್ ಕಾರಿಡಾರ್‍ಗೂ ಕಾಶ್ಮೀರ ವಿವಾದಕ್ಕೂ ಸಂಬಂಧವಿಲ್ಲ : ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

India--China--01

ಬೀಜಿಂಗ್, ಏ.18- ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮೂಲಕ ಹಾಯ್ದು ಹೋಗಿರುವ ಚೀನಾ-ಪಾಕಿಸ್ತಾನ ನಡುವಿನ ವ್ಯೂಹಾತ್ಮಕ ಎಕನಾಮಿಕ್ ಕಾರಿಡಾರ್ ಯೋಜನೆಯನ್ನು ಭಾರತ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಬೀಜಿಂಗ್, ಕಾಶ್ಮೀರ ವಿವಾದಕ್ಕೂ ಈ ಯೋಜನೆಗೂ ಯಾವುದೇ ನೇರ ಸಂಬಂಧವಿಲ್ಲ. ಇದು ಬರೀ ವಾಣಿಜ್ಯ-ವಹಿವಾಟು ಉದ್ಯಮವಷ್ಟೇ ಎಂದು ಹೇಳಿದರು.  ಇದಕ್ಕೆ ನವದೆಹಲಿ ಆತಂಕ ಪಡುವ ಅಗತ್ಯವಿಲ್ಲ. ಚೀನಾ ಅಧ್ಯಕ್ಷ ಗ್ಸಿಜಿನ್‍ಸಿಂಗ್ ಅವರ ಕನಸಿನ ಕೂಸಾಗಿರುವ ಒನ್ ಬೆಲ್ಟ್-ಒನ್ ರೋಡ್ ಎಂಬ ಮಹತ್ವದ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಭಾರತ ಸ್ವಾಗತಿಸಿತ್ತು ಎಂದು ಹೇಳಿರುವ ಚೀನಾ ಆಡಳಿತ, ಈ ಯೋಜನೆಗೆ ಭಾರತವೂ ಸಹಮತ ತೋರಿಸಬೇಕು ಎಂದು ತಿಳಿಸಿದೆ.ಮೊದಲನೆಯದಾಗಿ ಒನ್‍ಬೆಲ್ಟ್-ಒನ್‍ರೋಡ್ ಯೋಜನೆಯಲ್ಲಿ ಭಾರತ ಪಾಲ್ಗೊಳ್ಳುವುದನ್ನು ನಾನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್‍ಯಿ ಮಾಧ್ಯಮದವರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin