ಕಸ ವಿಲೇವಾರಿ ಸುಗಮವಾದರೆ ಸ್ಮಾರ್ಟ್ ಸಿಟಿಗೆ ಅರ್ಥ

ಈ ಸುದ್ದಿಯನ್ನು ಶೇರ್ ಮಾಡಿ

roshan

ದಾವಣಗೆರೆ, ಏ.18- ನಗರದಿಂದ ಹಂದಿಗಳನ್ನು ಹೊರಕ್ಕೆ ಕಳುಹಿಸಿ, ಬಯಲು ಶೌಚ ಮುಕ್ತಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವಂತಾಗಿ ಕಸ ವಿಲೇವಾರಿ ಸುಗಮವಾದರೆ ಮಾತ್ರ ಜಿಲ್ಲೆಯು ಸ್ಮಾರ್ಟ್ ಸಿಟಿಯಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಬೀದಿಗಳಲ್ಲಿ ಹಂದಿಗಳು ಓಡಾಡಿಕೊಂಡಿದ್ದರೆ ನಾಚಿಕೆಯಾಗುತ್ತದೆ. ಬಯಲು ಶೌಚಾಲಯ ಇಟ್ಟುಕೊಂಡು ಸ್ಮಾರ್ಟ್ ಸಿಟಿ ಎಂದು ಉಪ್ಪರಿಗೆ ಮೇಲೆ ಬೊಬ್ಬೆ ಹಾಕಲು ಆಗುವುದಿಲ್ಲ ಎಂದರು.

ಹಂದಿ ಮಾಲೀಕರು ಹಂದಿಗಳನ್ನು ಹೊರಗೆ ಸಾಗಿಸಲು ಒಪ್ಪುತ್ತಿಲ್ಲ ಎಂದು ಪಾಲಿಕೆ ಆಯುಕ್ತ ತಿಳಿಸಿದರು.20 ವಾರ್ಡ್‍ಗಳಲ್ಲಿ ಬಯಲು ಶೌಚಾಲಯ ಸಮಸ್ಯೆ ಇದೆ ಎಂದು ಪಾಲಿಕೆ ಆಯುಕ್ತ ನಾರಾಯಣಪ್ಪ ಹೇಳಿದಾಗ ಪ್ರತಿಕ್ರಿಯಿಸಿದ ರೋಷನ್‍ಬೇಗ್ ಬಯಲು ಶೌಚಾಲಯ ಇಟ್ಟುಕೊಂಡು ಸ್ಮಾರ್ಟ್ ಸಿಟಿ ಎಂದು ಬೊಬ್ಬೆ ಹೊಡೆಯಬೇಡಿ, ಕ್ರಮ ಕೈಗೊಳ್ಳಿ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಲ್.ಮಲ್ಲಿಕಾರ್ಜುನ್ ಮಾತನಾಡಿ, ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಂಡರೂ ಸಮಸ್ಯೆ ಪರಿಹಾರವಾಗಲಿದೆ ಎಂದರು.ಮೇಯರ್ ಅನಿತಾಬಾಯಿ, ಮಾಲತೇಶ್, ಉಪಮೇಯರ್ ಮಂಜಮ್ಮ, ಜಿಲ್ಲಾಧಿಕಾರಿ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin