ಟ್ರ್ಯಾಕ್ಟರ್ ಮೂಲಕ ಕುಡಿಯುವ ನೀರು ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

bagepalli
ಬಾಗೇಪಲ್ಲಿ, ಏ.18- ತಾಲ್ಲೂಕಿನಲ್ಲಿ ಸತತವಾಗಿ 8 ವರ್ಷಗಳಿಂದ ಮಳೆ ಆಗದೇ ಇರುವುದರಿಂದ ಕುಡಿಯುವ ನೀರಿಗೆ ತೊಂದರೆಯುಂಟಾಗಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳ ಅನುದಾನದಲ್ಲಿ 45 ಲಕ್ಷ ಹಾಗೂ ಪುರಸಭೆ 5 ಲಕ್ಷ ಅನುದಾನದಲ್ಲಿ ಟ್ರ್ಯಾಕ್ಟರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಮಮತಾನಾಗರಾಜರೆಡ್ಡಿ ತಿಳಿಸಿದರು. ಪುರಸಭೆ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವುದರಿಂದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಸದಸ್ಯರು ಸೇರಿ ಟ್ರ್ಯಾಕ್ಟರ್‍ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದಂತೆ ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಟ್ಟಣದ 23 ವಾರ್ಡ್‍ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರನ್ನು ಸಾರ್ವಜನಿಕರು ವೃಥಾ ಖರ್ಚು ಮಾಡಬಾರದು ಎಂದು ಕರೆ ನೀಡಿದರು. ಪುರಸಭೆ ಉಪಾಧ್ಯಕ್ಷೆ ಹುಸೇನ್‍ಭೀ, ಮಾಜಿ ಉಪಾಧ್ಯಕ್ಷರಾದ ಆ.ನ.ಮೂರ್ತಿ, ಎಲ್.ಭಾಸ್ಕರ್, ಸದಸ್ಯರಾದ ಇನಾಯುತುಲ್ಲಾ, ನಲ್ಲಪ್ಪ, ಮುಖಂಡರಾದ ಪಾಜೇನಹಳ್ಳಿನಾಗರಾಜರೆಡ್ಡಿ, ಸದಾ, ಗುತ್ತಿಗೆದಾರ ರಾಜಾರೆಡ್ಡಿ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin