ತೆಲಂಗಾಣದಲ್ಲಿ ಬಿಸಿಲಿಗೆ ಬೇಗೆಗೆ 7 ಮಂದಿ ಬಲಿ, 44 ಡಿಗ್ರಿ ದಾಟಿದ ತಾಪಮಾನ

ಈ ಸುದ್ದಿಯನ್ನು ಶೇರ್ ಮಾಡಿ

Temp-sgfASDGSDG

ಹೈದರಾಬಾದ್, ಏ.18- ತೆಲಂಗಾಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಲೇ ಇದ್ದು, ಇಂದು ಬಿಸಿಲಿನ ಝಳಕ್ಕೆ ಏಳು ಮಂದಿ ಬಲಿಯಾಗಿದ್ದಾರೆ. ರಾಜ್ಯದ ವಿವಿಧೆಡೆ ಬಿಸಿಲಿನ ತಾಪಮಾನ 44 ಡಿಗ್ರಿ ಸೆಲ್ಷಿಯಸ್‍ಗೇರಿದ್ದು, ನೆಲದ ಮೇಲೆ ನಿಲ್ಲುವುದಕ್ಕೂ ಸಾಧ್ಯವಾಗದಂತೆ ಭೂಮಿ ಅಗ್ನಿಕುಂಡದಂತಾಗಿದೆ. ಬಿಸಿ ಗಾಳಿ ಉಸಿರಾಟದಿಂದ ಜನ ತೀವ್ರ ಅಸ್ವಸ್ಥರಾಗುತ್ತಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 9 ಗಂಟೆ ನಂತರ, ಸಂಜೆ 5 ಗಂಟೆವರೆಗೆ ಮನೆಯಿಂದ ಹೊರ ಬರದಂತೆ ನಾಗರಿಕರಿಗೆ ಸೂಚನೆ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin