ನಾನು ಹೊರಗಿನವಳು ಎಂಬ ಭಾವನೆ ಈಗಲೂ ಕಾಡುತ್ತಿದೆ

ಈ ಸುದ್ದಿಯನ್ನು ಶೇರ್ ಮಾಡಿ

swara-bhaskar

ಸ್ವರ ಭಾಸ್ಕರ್-ತನು ವೆಡ್ಸ್ ಮನು ಚಿತ್ರದಿಂದ ಅನಾರ್ಕಲಿ ಆಫ್ ಅರ್ಹಾ ಚಿತ್ರದವರೆಗೆ ಅನೇಕ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿರುವ ಪ್ರತಿಭಾವಂತ ಬಾಲಿವುಡ್ ನಟಿ. ಆದರೆ ಈಕೆಗೆ ಒಂದು ನೋವು ಕಾಡುತ್ತಿದೆಯಂತೆ. ನಾನು ಹೊರಗಿನವಳು ಎಂಬ ಭಾವನೆ ಈಗಲೂ ಕಾಡುತ್ತಿದೆ. ಬಾಲಿವುಡ್‍ಗೆ ಹೊಸಬಳು ಎಂಬ ಭಾವನೆ ಉಂಟಾಗುತ್ತಿದೆ ಎಂದು ಸ್ವರ ಭಾಸ್ಕರ್ ಆಲಾಪಿಸಿದ್ದಾಳೆ. ಚಿತ್ರೋದ್ಯಮದಲ್ಲಿ ಅತಿ ಬೇಗನೆ ಛಾಪುಮೂಡಿಸುವುದು ತುಂಬಾ ಕಷ್ಟ. ಬಾಲಿವುಡ್‍ನಲ್ಲಂತೂ ಅದು ತುಂಬಾ ತುಂಬಾ ಕಷ್ಟ. ಇಲ್ಲಿ ನನ್ನ ಗುರುತು ಉಳಿಸಬೇಕೆಂದು ನಾನು ಪ್ರತಿ ದಿನ ಶ್ರಮಿಸುತ್ತಲೇ ಇದ್ದೇನೆ. ಇದಕ್ಕಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ. ಆದರೂ ಇದು ತುಂಬಾ ಕಷ್ಟ. ಬೇರೆ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲೂ ಕೂಡ ಅನೇಕ ಅಡಚಣೆಗಳು ಮತ್ತು ಎಡರುತೊಡರುಗಳಿವೆ ಎಂದು ವಿಶ್ಲೇಷಿಸುತ್ತಾಳೆ ಎಸ್‍ಬಿ. ಸಿನಿಮಾರಂಗದಲ್ಲಿ ನಾನು ಗುರುತು ಉಳಿಸಿದ್ದೇನೆ ಎಂದು ನಾನು ಎಂದಿಗೂ ಅಂದುಕೊಂಡಿಲ್ಲ.ಈಗಲೂ ನಾನು ಹೊರಗಿನವಳು ಎಂಬ ಭಾವನೆ ಆಗಾಗ ಕಾಡುತ್ತದೆ. ಆದಾಗ್ಯೂ ಇಲ್ಲಿ ನನ್ನ ಅಸ್ತಿತ್ವ ಉಳಿಸಲು ಶ್ರಮಿಸುತ್ತಿದ್ದೇನೆ ಎಂದು ಸ್ವರ ಹೇಳಿಕೊಂಡಿದ್ದಾಳೆ. ಈಕೆ ನಟಿಸಿದ ಎಲ್ಲ ಸಿನಿಮಾಗಳಲ್ಲೂ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿವೆ. ಒಂದು ಚಿತ್ರದ ಯಶಸ್ಸಿನಷ್ಟೇ ಒಂದು ವಿಮರ್ಶೆಯೂ ಕೂಡ ಮುಖ್ಯವಾಗುತ್ತದೆ. ವಿಮರ್ಶೆಗಳು ಅಭಿವ್ಯಕ್ತಿಗೊಂಡಾಗ ನನ್ನ ಸಾಮಥ್ರ್ಯವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅನಾರ್ಕಲಿ ಆಫ್ ಆರ್ಹಾದ ನಟಿ ಹೇಳಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin