ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ 

ಈ ಸುದ್ದಿಯನ್ನು ಶೇರ್ ಮಾಡಿ

hanging -suicide
ತುರುವೇಕೆರೆ, ಏ.18-ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ 12ನೇ ವಾರ್ಡ್‍ನ ಮಗ್ಗದ ಬೀದಿಯಲ್ಲಿನ ಮನೆಯಲ್ಲಿ ನೆಡೆದಿದೆ. ಪಟ್ಟಣದ ನಿವಾಸಿ ಮಂಜುನಾಥ್ ಎಂಬುವರ ಪುತ್ರಿ ತ್ರೀವೇಣಿ (25) ಸಾವನಪ್ಪಿರುವ ದುರ್ದೈವಿ. ಭಾನುವಾರ ರಾತ್ರಿ ತನ್ನ ರೂಮಿನಲ್ಲಿ ಮಲಗಲು ತೆರಳಿದ್ದಾಗ ಈಕೆ ರೂಮಿನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಿನ್ನೆ ಬೆಳಿಗ್ಗೆ ಮನೆಯವರು ನೋಡಿ ಪಟ್ಟಣದ ಪೊಲೀಸರಿಗೆ ತಿಳಿಸಿದ್ದು. ಪೊಲೀಸರು ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin