ವೇಗದ ರೈಲು ತಂತ್ರಜ್ಞಾನ ತರಬೇತಿಗಾಗಿ 500 ಮಂದಿ ವಿದೇಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Bullet-Trrain--01

ನವದೆಹಲಿ, ಏ.18- ದೇಶದಲ್ಲಿ ಕೆಲವು ಆಯ್ದ ನಗರಗಳ ಮಧ್ಯೆ ಸಂಚರಿಸಲಿರುವ ಒಂದು ತಾಸಿಗೆ 160 ರಿಂದ 200 ಕಿಲೋ ಮೀಟರ್ ವೇಗದ ರೈಲುಗಳ ನಿರ್ವಹಣೆಗಾಗಿ ಅತಿ ವೇಗದ ರೈಲಿನ ಸಂಚಾರ ತಂತ್ರಜ್ಞಾನದ ಮಾಹಿತಿ ಪಡೆಯಲು ದೇಶದ 500 ಮಂದಿ ರೈಲ್ವೆ ಇಲಾಖೆ ಉದ್ಯೋಗಿಗಳಿಗೆ ಚೀನಾ ಮತ್ತು ಜಪಾನ್‍ನಲ್ಲಿ ತರಬೇತಿ ಕೊಡಿಸುವ ಕಾರ್ಯಕ್ರಮವಿದೆ ಎಂದು ರೈಲ್ವೆ ಖಾತೆ ಮೂಲಗಳು ತಿಳಿಸಿವೆ.ಡೆಲ್ಲಿ-ಹೌರಾ ಮತ್ತು ಡೆಲ್ಲಿ-ಮುಂಬೈ ವಲಯದಲ್ಲಿ ಈ ವೇಗದ ರೈಲುಗಳ ಸಂಚಾರಕ್ಕೆ ಸರ್ಕಾರ ಯೋಜನೆಗಳನ್ನು ತಯಾರಿಸಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕೆಲವು ಕಾಮಗಾರಿಗಳು ಹಾಗೂ ತಾಂತ್ರಿಕ ಕಾರ್ಯಗಳು ಮುಗಿದ ನಂತರ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಡೆಲ್ಲಿ ಮತ್ತು ಚಂಡೀಗಢ ನಡುವೆಯೂ ತಾಸಿಗೆ 200ಕಿಲೋ ಮೀಟರ್ ವೇಗದ ರೈಲು ಓಡಿಸಲು ಇಲಾಖೆ ಚಿಂತನೆ ನಡೆಸಿದೆ.  ಸಾಧ್ಯವಾದಷ್ಟು ದೇಶದ ಹಲವೆಡೆ ವೇಗದ ರೈಲುಗಳನ್ನು ಸಂಚಾರಕ್ಕೆ ಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin