ಶಾಸಕರ ಅನುದಾನದಲ್ಲಿ ದೇವಾಲಯಕ್ಕೆ ಹಣ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

LONE- RELEASE
ಕಡೂರು, ಏ.18-ಪಟ್ಟಣದ ಎರಡು ದೇವಾಲಯಗಳಿಗೆ ಶಾಸಕರ ಅನುದಾನದಲ್ಲಿ ತಲಾ ರೂ. 2 ಲಕ್ಷದಂತೆ ಒಟ್ಟು ರೂ. 4 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.ಪಟ್ಟಣದ ಕೋಟೆ ಬಡಾವಣೆಯ ಅಂಬಳೆ ಶ್ರೀ ಬೀರಲಿಂಗೇಶ್ವರ ದೇವಾಲಯ ಹಾಗೂ ಸುಭಾಷ್‍ನಗರದ ಶ್ರೀ ಸೋಮೆಶ್ವರಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಈ ದೇವಾಲಯಗಳಿಗೆ ತಲಾ ರೂ. 2 ಲಕ್ಷ ಅನುದಾನ ಬಿಡುಗಡೆಯಾಗಿರುವ ವಿಷಯ ತಿಳಿಸಿದರು.

ತಮ್ಮ ಕ್ಷೇತ್ರದಲ್ಲಿ ಸುಮಾರು 500ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ವಿವಿಧ ದೇವಾಲಯಗಳಿವೆ, ನಾಲ್ಕು ವರ್ಷಗಳ ತೀವ್ರ ಬರಗಾಲದ ನಡುವೆ ಜನರ ಭಕ್ತಿಗೆ ಬರ ಬಂದಿಲ್ಲ ಎಂದರು.
ತಾವು ಬಹುತೇಕ ಎಲ್ಲಾ ದೇವಾಲಯಗಳಿಗೂ ಅಭಿವೃದ್ದಿಗಾಗಿ ಅನುದಾನವನ್ನು ನೀಡಿದ್ದು. ಕೆಲವು ದೇವಾಲಯಗಳಿಗೆ ಸಂಸದರ ನಿಧಿಯಿಂದಲೂ ಅನುದಾನವನ್ನು ನೀಡಲಾಗಿದೆ ಎಂದು ನುಡಿದರು.ಜೆಡಿಎಸ್ ಮುಖಂಡ ಭಂಡಾರಿಶ್ರೀನಿವಾಸ್ ಮಾತನಾಡಿ ಶಾಸಕ ದತ್ತ ಅವರು ಅಭಿವೃದ್ದಿ ಕೆಲಸಗಳನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ದೇವಾಲಯಗಳ ಅಭಿವೃದ್ದಿಯ ಜೊತೆಗೆ ರಸ್ತೆ, ಕುಡಿಯುವ ನೀರು, ಚರಂಡಿ ಮುಂತಾದ ಮೂಲಭೂತ ಅಭಿವೃದ್ದಿ ಕಾಮಗಾರಿಗಳಿಗೆ ಒತ್ತು ನೀಡಿದ್ದಾರೆ ಎಂದರು.ಪುರಸಭೆ ಅಧ್ಯಕ್ಷ ಎಂ. ಮಾದಪ್ಪ, ಸದಸ್ಯರಾದ ಜಯಮ್ಮ, ಜಿ. ಸೋಮಯ್ಯ, ಎಪಿಎಂಸಿ ನಿರ್ದೇಶಕ ಕೆ.ಹೆಚ್. ಲಕ್ಕಣ್ಣ, ಮುಖಂಡರಾದ ಮೀಸೆ ಕೃಷ್ಣಪ್ಪ, ಹಳೇಪೇಟೆ ಬಸಪ್ಪ, ಪುರಸಭೆ ಮಾಜಿ ಸದಸ್ಯ ಮಂಜುನಾಥ, ಮಚ್ಚೇರಿ ಮಹೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin