ಗದಗ : ತೋಳಗಳ ದಾಳಿಗೆ 47 ಕುರಿಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Gadag-News

ಗದಗ,ಏ.19- ತೋಳಗಳ ಹಿಂಡು ಹೊಲದಲ್ಲಿ ಕೂಡಿ ಹಾಕಿದ್ದ 47 ಕುರಿಗಳನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕು ಸಮೀಪದ ಕಲ್ಲಿಗನೂರ ಗ್ರಾಮದಲ್ಲಿ ನಿನ್ನೆ ರಾತ್ರಿ ಜರುಗಿದೆ.  ಹೊಲದಲ್ಲಿ ಬಲೆಯ ಅಂಕಣ ನಿರ್ಮಿಸಿ ಅದರೊಳಗೆ ಕುರಿಗಳನ್ನು ಕೂಡಿ ಹಾಕಲಾಗಿತ್ತು. ಊರು ಹತ್ತಿರ ಇರುವ ಕಾರಣ ಕುರಿಗಾರ ಊಟಕ್ಕೆಂದು ರಾತ್ರಿ 10ಘಂಟೆಗೆ ಮನೆಗೆ ಹೋದಾಗ ಸುಮಾರಿಗೆ ಏಳೆಂಟು ತೋಳಗಳು ದಾಳಿ ಮಾಡಿ ಕುರಿಗಳನ್ನು ತಿಂದು ಹಾಕಿವೆ.  ನಿಂಗಪ್ಪ ಹನಮಪ್ಪ ಬೂದಿಹಾಳ (41) ಎಂಬುವವರಿಗೆ ಈ ಕುರಿಗಳು ಸೇರಿದ್ದು, ಘಟನೆಯಿಂದ ಸುಮಾರು ರೂ. 2 ಲಕ್ಷ 50 ಸಾವಿರ ನಷ್ಟವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.ಅರಣ್ಯ ರಕ್ಷಕ ಎಸ್.ಎಂ. ತಳವಾರ ಹಾಗೂ ಗ್ರಾಮ ಲೆಕ್ಕಾಧಿಕಾರಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ಗಡೇದವರ ಸ್ಥಳ ಪರಿಶೀಲನೆ ನಡೆಸಿದರು.  ಪಶುವೈದ್ಯಾಧಿಕಾರಿಗೆ ಮಾಹಿತಿ ನೀಡಲಾಗಿದ್ದು ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ಆ ವರದಿಯನ್ನು ತಹಶೀಲ್ದಾರ್ ಅವರಿಗೆ ನೀಡಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದಿನಗಳ ಹಿಂದೆ ತಾಲ್ಲೂಕಿನ ನೆಲ್ಲೂರ ಪ್ಯಾಟಿಯಲ್ಲಿ ಇಂಥದ್ದೇ ಘಟನೆ ಸಂಭವಿಸಿ 38 ಕುರಿಗಳು ಮೃತಪಟ್ಟಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin