ಜನ ಹಿಂಗೂ ಯಾಮಾರಿಸ್ತಾರೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

chain--snatching

ಶ್ರೀರಂಗಪಟ್ಟಣ, ಏ.19- ಅಪರಿಚಿತ ದಂಪತಿಗಳು ವೃದ್ಧೆಯ ಸರ ಕಿತ್ತು ಪರಾರಿಯಾಗಿರುವ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಡೆದಿದೆ.  ನಿಂಗಮ್ಮ (60) ಸರ ಕಳೆದುಕೊಂಡ ವೃದ್ಧೆ.ನಿನ್ನೆ ಸರ್ಕಾರಿ ಆಸ್ಪತ್ರೆ ಮುಂಭಾಗ ನಿಂಗಮ್ಮ ನಿಂತಿದ್ದಾಗ ಅಪರಿಚಿತ ದಂಪತಿಗಳು ಕಣ್ಣು ಆಪರೇಷನ್ ಮಾಡಿಸಬೇಕು ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿದ ನಿಂಗಮ್ಮನಿಗೆ ಆಪರೇಷನ್ ಮಾಡುವ ಮುನ್ನ ಎಕ್ಸ್‍ರೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದಕ್ಕೆ ನಿಮ್ಮ ಮೈಮೇಲೆ ಇರುವ ಒಡವೆಗಳನ್ನು ತೆಗೆಯಬೇಕು ಎಂದಿದ್ದಾರೆ.


ಆಗ ನಿಂಗಮ್ಮ 35 ಗ್ರಾಂ ಮಾಂಗಲ್ಯಸರ, 5 ಗ್ರಾಂ ಓಲೆಯನ್ನು ದಂಪತಿಗಳಿಗೆ ಬಿಚ್ಚಿ ಕೊಟ್ಟಿದ್ದಾರೆ.ಈ ವೇಳೆ ಎಕ್ಸ್‍ರೇ ಚೀಟಿ ಬರೆದುಕೊಡುತ್ತೇನೆ. ಸ್ವಲ್ಪ ಹೊತ್ತು ಇಲ್ಲೇ ಎಂದು ಪರಾರಿಯಾಗಿದ್ದಾರೆ.ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin