ಬೆಳ್ಳಂದೂರು ಕೆರೆ ಸುತ್ತಮುತ್ತ ಕೈಗಾರಿಕೆಗಳನ್ನು ಮುಚ್ಚಲು ಎನ್‍ಜಿಟಿ ಮಧ್ಯಂತರ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Bellanduru--01

ನವದೆಹಲಿ, ಏ.19-ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‍ಜಿಟಿ), ಆ ಪ್ರದೇಶದ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣ ಮುಚ್ಚುವಂತೆ ಇಂದು ಮಧ್ಯಂತರ ಆದೇಶ ನೀಡಿದೆ. ನಾಳೆಯಿಂದಲೇ ಕರೆಯನ್ನು ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಈ ಕಾರ್ಯ ಆರಂಭಿಸಿರುವ ಬಗ್ಗೆ ನ್ಯಾಯಮಂಡಳಿಗೆ ಮಾಹಿತಿ ನೀಡುವಂತೆಯೂ ಕಟ್ಟಪ್ಪಣೆ ಮಾಡಿದೆ.  ಅಲ್ಲದೇ ಬೆಳ್ಳಂದೂರು ಕೆರೆಗೆ ಯಾವುದೇ ತ್ಯಾಜ್ಯ ಹಾಕದಂತೆ ಹಾಗೂ ಒಂದು ವೇಳೆ ತ್ಯಾಜ್ಯ ಹಾಕಿದರೆ 5 ಲಕ್ಷ ರೂ.ಗಳ ದಂಡ ವಿಧಿಸುವಂತೆ ಸೂಚನೆ ನೀಡಿದ ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಈ ಬಗ್ಗೆ ನಿಗಾ ವಹಿಸಲು ಸಮಿತಿಯನ್ನು ರಚಿಸಿದ್ದಾರೆ.ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ನಿನ್ನೆ ರಾಜ್ಯದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿದ್ದ ನ್ಯಾಯಮೂರ್ತಿ ಅವರು ಇಂದು ಕೂಡ ಈ ಪ್ರಕರಣದ ವಿಚಾರಣೆ ನಡೆಸಿದರು. ನಗರಾಭಿವೃದ್ದಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮತ್ತು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಝ್ ಖಾನ್ ಅವರು ಎನ್‍ಜಿಟಿ ಮುಂದೆ ಹಾಜರಾದರು.
ಈ ಪ್ರಕರಣದಲ್ಲಿ ನಿನ್ನೆ ಬಿಸಿ ಮುಟ್ಟಿಸಿದ್ದರಿಂದ ಕ್ಷಮಾಪಣೆ ಕೋರಿ ಜಂಟಿ ಆಯುಕ್ತರು ಅಫಿಡವಿಟ್ ಸಲ್ಲಿಸಿದರು. ಎನ್‍ಜಿಟಿ ಆದೇಶ ಉಲ್ಲಂಘಿಸಿರುವ ಸುತ್ತೊಲೆಯನ್ನು ಕೂಡಲೇ ಹಿಂದಕ್ಕೆ ಪಡೆಯುತ್ತೇನೆ ಎಂದು ನ್ಯಾಯಾಧಿಕರಣಕ್ಕೆ ಅವರು ಸ್ಪಷ್ಟಪಡಿಸಿದರು.

Bellandur-lake

ಈ ಪ್ರಕರಣದ ಬಗ್ಗೆ ಮತ್ತೆ ಕೆಂಪಾದ ಹಸಿರು ಪೀಠ ಇಂದು ಕೂಡ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ಕೂಡಲೆ ಬೆಳ್ಳಂದೂರು ಕರೆಯ ಸುತ್ತಮತ್ತಲಿನ ಕೈಗಾರಿಕೆಗಳನ್ನು ಮುಚ್ಚಬೇಕು. ಕಸ-ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಬೇಕು. ನಿಯಮ ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೇ 5 ಲಕ್ಷ ರೂ. ದಂಡ ವಿಧಿಸಬೇಕು ಎಂದು ಸೂಚನೆ ನೀಡಿದರು.   ನಾಳೆಯಿಂದಲೇ ಕರೆಯನ್ನು ಸ್ವಚ್ಚಗೊಳಿಸುವ ಕಾರ್ಯ ಆರಂಭವಾಗಬೇಕು. ಇದಕ್ಕಾಗಿ ಟೆಂಡರ್ ಕರೆಯಬಾರದು ಎಂದು ತಾಕೀತು ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin