ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ 43 ಜೀತದಾಳುಗಳಿಗೆ ಮುಕ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Kolar--021

ಕೋಲಾರ, ಏ.20– ಇಟ್ಟಿಗೆ ಕಾರ್ಖಾನೆಗೆ ಉಪವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿದ್ದು, 43 ಜೀತದಾಳುಗಳನ್ನು ಮುಕ್ತಗೊಳಿಸಿದ್ದಾರೆ. ಮಾಲೂರು ತಾಲೂಕು ಲಕ್ಕೂರು ಗ್ರಾಮದ ಶ್ರೀನಿವಾಸಪ್ಪ ಎಂಬುವರ ಮಾಲೀಕತ್ವದ ಎನ್‍ಬಿಎನ್ ಕಾರ್ಖಾನೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ಮಂಜುನಾಥ್, ಮಾಲೂರು ತಹಸೀಲ್ದಾರ್ ಗಿರೀಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ನಿರಂಜನ್ ಮತ್ತು ಸಿಬ್ಬಂದಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.



ಈ ವೇಳೆ ಅಲ್ಲಿದ್ದ ಒರಿಸ್ಸಾ ರಾಜ್ಯದ 43 ಜೀತದಾಳುಗಳನ್ನು ಮುಕ್ತಗೊಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin