ತಾತನನ್ನು ಕೊಂದ ದೃಶ್ಯಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದ ‘ಮೆಂಟಲ್’ಮೊಮ್ಮಗ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Live-Murder

ನ್ಯೂಯಾರ್ಕ್, ಏ.20-ಅಜ್ಜನನ್ನು ಕೊಂದು ಆ ಕೃತ್ಯದ ದೃಶ್ಯಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ ಮೊಮ್ಮಗನನ್ನು ಪೊಲೀಸರು ಬೆನ್ನತ್ತಿದ ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೆರಿಕದ ಪೆನ್ಸಿಲ್ವಿನಿಯಾದಲ್ಲಿ ನಡೆದಿದೆ.  ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದನೆಂದು ಹೇಳಲಾದ 37 ವರ್ಷ ಸ್ಟೀವ್ ಸ್ಟೀಫನ್ ಎಂಬಾತ ಈಸ್ಟರ್ ಸಂಡೆಯಂದು ತನ್ನ 74 ವರ್ಷ ಅಜ್ಜ ರಾಬರ್ಟ್ ಗಾಡ್ವಿನ್ ಸೀನಿಯರ್ ಎಂಬುವರನ್ನು ಓಹಿಹೋ ರಾಜ್ಯದ ಕ್ವೀವ್‍ಲ್ಯಾಂಡ್‍ನಲ್ಲಿ ಗುಂಡು ಹಾರಿಸಿ ಕೊಂದು ಅದರ ಚಿತ್ರಗಳನ್ನು ವೈರಲ್ ಮಾಡಿದ್ದ.ಪೆನ್ಸಿಲ್ವಿನಿಯಾದ ಹೋಟೆಲ್ ನೌಕರನೊಬ್ಬ ಈತನನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ. ಪೊಲೀಸರನ್ನು ನೋಡಿ ಪರಾರಿಯಾಗಿದ್ದ ಈತ ಕೆಲವೇ ನಿಮಿಷಗಳಲ್ಲಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin