ಬಾಹುಬಲಿ-2 ಚಿತ್ರಬಿಡುಗಡೆಗೆ ಅವಕಾಶ ನೀಡುವಂತೆ ಕನ್ನಡಿಗರಲ್ಲಿ ರಾಜಮೌಳಿ ಕಳಕಳಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Rajamouli--01

ಹೈದರಾಬಾದ್, ಏ.20-ಕಾವೇರಿ ನದಿ ವಿಷಯಕ್ಕೆ ಸಂಬಂಧಪಟ್ಟಂತೆ ಚಿತ್ರನಟ ಸತ್ಯರಾಜ್ ನೀಡಿರುವ ಹೇಳಿಕೆಗೂ ಮತ್ತು ಬಾಹುಬಲಿ-2 ಚಿತ್ರಕ್ಕೂ ಸಂಬಂಧ ಕಲ್ಪಿಸುವುದು ಬೇಡ ಎಂದು ಹೇಳಿರುವ ಚಲನಚಿತ್ರ ನಿರ್ದೇಶಕ ರಾಜಮೌಳಿ, ತಮ್ಮ ಮಹತ್ವಾಕಾಂಕ್ಷೆಯ ಈ ಚಿತ್ರಕ್ಕೆ ಕನ್ನಡಿಗರು ಬೆಂಬಲ ನೀಡುವಂತೆ ಕಳಕಳಿಯಿಂದ ಮನವಿ ಮಾಡಿದ್ದಾರೆ.  ಕರ್ನಾಟಕದಲ್ಲಿ ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ನೀಡಬೇಕೆಂದು ಅವರು ಕನ್ನಡಪರ ಹೋರಾಟಗಾರರು ಮತ್ತು ಕನ್ನಡ ಪ್ರೇಕ್ಷಕರನ್ನು ವಿನಮ್ರದಿಂದ ಕೋರಿದ್ದಾರೆ.



ಸತ್ಯರಾಜ್ ಹೇಳಿಕೆಯನ್ನು ವಿರೋಧಿಸಿ ಏ.28ರಂದು ಕನ್ನಡಪರ ಹೋರಾಟಗಾರ ವಾಟಾಳ್‍ನಾಗರಾಜ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಬೆಂಗಳೂರು ಬಂದ್ ಕರೆ ಹಿನ್ನೆಲೆಯಲ್ಲಿ ರಾಜಮೌಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಕನ್ನಡದಲ್ಲಿ ಮಾತನಾಡಿದ ರಾಜಮೌಳಿ, ಸತ್ಯರಾಜ್ ವೈಯಕ್ತಿಕ ಹೇಳಿಕೆಗೂ ಹಾಗೂ ಬಾಹುಬಲಿ-2 ಚಿತ್ರಕ್ಕೂ ಸಂಬಂಧವಿಲ್ಲ. ಬಾಹುಬಲಿ ಮೊದಲ ಭಾಗಕ್ಕೆ ಕರ್ನಾಟಕ ಜನತೆ ಅಪಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ನಾನು ಕನ್ನಡಿಗರಿಗೆ ಚಿರಋಣಿಯಾಗಿದ್ದೇನೆ ಎಂದರು.  ಆದರೆ, ಸತ್ಯರಾಜ್ ಅವರ ವೈಯಕ್ತಿಕ ಹೇಳಿಕೆಯ ಕೋಪವನ್ನು ನಮ್ಮ ಈ ಚಿತ್ರದ ಮೇಲೆ ತೋರಿಸುವುದು ಬೇಡ ಎಂದು ಮನವಿ ಮಾಡಿದ ಅವರು, ಬಹಳ ಕಷ್ಟಪಟ್ಟು ಈ ಚಿತ್ರ ನಿರ್ಮಿಸಿದ್ದೇವೆ. ಇದಕ್ಕೆ ಕರ್ನಾಟಕ ಜನತೆಯ ಬೆಂಬಲ ಅತಿ ಮುಖ್ಯ. ಹಿಂದಿನ ಚಿತ್ರಕ್ಕೆ ನೀಡಿದ ಪ್ರೋತ್ಸಾಹ, ಬೆಂಬಲವನ್ನು ಈ ಚಿತ್ರಕ್ಕೂ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin