ಬಿಇ ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣ : ಮತ್ತಿಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Belagavi-Kidnap--01

ಬೆಳಗಾವಿ, ಏ.20- ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅಪಹರಣ ಪ್ರಕರಣ ಸಂಬಂಧ ಟಿಳಕವಾಡಿ ಠಾಣೆ ಪೊಲೀಸರು ಇನ್ನಿಬ್ಬರನ್ನು ಬಂಧಿಸಿದ್ದಾರೆ. ಬಸವೇಶ್ವರ ಮೆಡಿಕಲ್ ಸ್ಟೋರ್ಸ್ ಮಾಲೀಕ ಚಂದ್ರಶೇಖರ್ ಮತ್ತು ಕೊತವಾಲ್ ಟ್ರೇಡಿಂಗ್ ಕಂಪೆನಿಯ ಮಾಲೀಕ ಸತೀಶ ಬಂಧಿತರು.  ಚಂದ್ರಶೇಖರ್ ಆರೋಪಿಗಳಿಗೆ 50ಕ್ಕೂ ಹೆಚ್ಚು ನಿದ್ರೆ ಮಾತ್ರೆ ನೀಡಿದ್ದರೆ, ಸತೀಶ 2.5 ಕೆಜಿ ಕ್ಲೋರೋಫಾರಂ ನೀಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಅಂಗಡಿಗಳಿಗೆ ನೀಡಿರುವ ಲೈಸೆನ್ಸ್ ರದ್ದು ಪಡಿಸುವಂತೆ ಕೋರಿ ಪೊಲೀಸರು ಸಂಬಂಧಿತ ಇಲಾಖೆಗಳಿಗೆ ಪತ್ರ ಬರೆಯಲು ಸಜ್ಜಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



ಜಿಐಟಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ 8ನೇ ಸೆಮಿಸ್ಟರ್ ವಿದ್ಯಾರ್ಥಿನಿ ಧಾರವಾಡ ಮೂಲದ ಅರ್ಪಿತಾ ಗೋವಿಂದನಾಯಕ ಎಂಬಾಕೆಯನ್ನು ಅದೇ ಕಾಲೇಜಿನಲ್ಲಿ ಓದುತ್ತಿರುವ ದಿವ್ಯಾಮಾಲಘಾನ ಎಂಬಾಕೆ ತನ್ನ ಸ್ನೇಹಿತರ ಜತೆ ಸೇರಿ ಅಪಹರಿಸಿದ್ದಳು. ಸ್ನೇಹಿತೆಗೆ ಮತ್ತು ಬರುವ ಔಷಧವನ್ನು ಕಾಫಿಯಲ್ಲಿ ಬೆರೆಸಿ ಕುಡಿಸಿ ಅಪಹರಿಸಿದ್ದ ದಿವ್ಯಾ, ಕೇದಾರಿಪಾಟೀಲ ಹಾಗೂ ಸುಮೀತ ಆಕೆಯನ್ನು ಗದಗದಲ್ಲಿನ ಕೇದಾರನ ಮನೆಯಲ್ಲಿ ಇರಿಸಿದ್ದರು. ನಂತರ ಅರ್ಪಿತಾಳ ಪೋಷಕರಿಗೆ ಕರೆ ಮಾಡಿ ಒತ್ತೆ ಹಣಕ್ಕೆ ಒತ್ತಾಯಿಸಿದ್ದರು. ಈ ಸಂಬಂಧ ಅರ್ಪಿತಾಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin