ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಸೋನು

ಈ ಸುದ್ದಿಯನ್ನು ಶೇರ್ ಮಾಡಿ

sonu
ಈ ಬಾಲಿವುಡ್ ಮಂದಿಯೇ ಹೀಗೆ (ಕೆಲವರು ಎಂದುಕೊಳ್ಳಿ). ತಮ್ಮ ಖಾತೆಗೆ ಸಾಕಷ್ಟು ಹೆಸರು-ಹಣ ಜಮಾ ಆಗುತ್ತಿದ್ದಂತೆಯೇ ಕಣ್ಣು ನೆತ್ತಿಯ ಮೇಲಕ್ಕೆ ಹೋಗಿಬಿಡುತ್ತವೆಯೇನೋ ಎಂಬ ಅನುಮಾನ. ಅವರಿಗೆ ಈ ಪ್ರಪಂಚದ ಗೊಡವೆಯೇ ಇಲ್ಲವೇನೋ ಎನ್ನುವ ಹಾಗೆ ವರ್ತಿಸಲಾರಂಭಿಸುತ್ತಾರೆ. ಒಟ್ಟಾರೆ, ಅದೇನಾದರೂ ಆಗಿರಲಿ, ದೇಶದ (ಸಾಧ್ಯವಾದರೆ ವಿದೇಶಗಳ) ಜನರೆಲ್ಲ ತಮ್ಮತ್ತ ನೋಡಬೇಕು. ನಾವು ಸುದ್ದಿಯಲ್ಲಿರಬೇಕು. ಅದರ ಪರಿಣಾಮ ಏನಾದರೆ ನನಗೇನು ಎಂಬಂಥ ಉಡಾಫೆ ಮಂದಿ ಇವರು.ಇಷ್ಟೆಲ್ಲ ಹೇಳಿದ ಮೇಲೆ ಅದಕ್ಕೆ ಉದಾಹರಣೆಯನ್ನೂ ಕೊಡಬೇಕಲ್ಲವೇ? ನೀವೇ ಓದಿ ನೋಡಿ. ಖ್ಯಾತ ಗಾಯಕ ಸೋನು ನಿಗಮ್ ಮಾಡಿರುವ ಘನಂದಾರಿ ಕೆಲಸ ನೋಡಿ… ಥೇಟ್ ನಾಡಾಡಿ ಮಂಗವೊಂದು ಬೆಣೆ ಕಿತ್ತ ಕಥೆಯಂತೆಯೇ ಇದೆ. ಹಾಯಾಗಿ ಮಲಗಿದ್ದ ಸೋನು ನಿಗಮ್‍ಗೆ ಮುಂಜಾನೆ ಮಸೀದಿಯಿಂದ ಕೇಳಿಬಂದ ನಮಾಜ್ (ಅಜಾನ್) ಸದ್ದಿಗೆ ಎಚ್ಚರವಾಯಿತಂತೆ.ಇದರಿಂದ ಕ್ರುದ್ಧನಾದ ಸೋನು ನಿಗಮ್, ತಕ್ಷಣ ಎದ್ದು ಬೆಣೆ ಕಿತ್ತೇ ಬಿಟ್ಟ ನೋಡಿ… ಸೀದಾ ಕಂಪ್ಯೂಟರ್ ಎದುರು ಕುಳಿತು ಬಯಲಾಟದ ಶೈಲಿಯಲ್ಲಿ, “ಅಯ್ಯೋ… ಈ ಭಾರತದಲ್ಲಿ ಇಂಥಾ ಬಲವಂತದ ಧಾರ್ಮಿಕತೆಗೆ ಕೊನೆಯಿಲ್ಲವೇ… ದೇವಾ” ಎಂದು (ಟ್ವೀಟ್) ಗುಜರಾಯಿಸಿಯೇ ಬಿಟ್ಟ. ಇನ್ನೇನು… ನಾನಾ ಕಡೆಯಿಂದ ಉಗಿಯಲಾರಂಭಿಸಿದರು. ಅಷ್ಟೇ ಅಲ್ಲ, “ಥೂ… ನನಗೆ ಈ ದೇವರು-ದಿಂಡಿರುಗಳಲ್ಲಿ ಒಂಚೂರೂ ನಂಬಿಕೆಯಿಲ್ಲ. ಅಂಥಾದ್ದರಲ್ಲಿ ದಿನಕ್ಕೆ ಐದು ಬಾರಿ ಈ ಬಲವಂತದ ಧಾರ್ಮಿಕತೆಯ ದಾಳಿಯನ್ನು ಹೇಗೆ ಸಹಿ ಸಲಿ… ಏನು ಮಾಡಲಿ… ಎಲ್ಲಿಗೆ ಹೋಗಲಿ… ಯಾರಿಗೆ ದೂರಲಿ..” ಅಂವೂ ಟ್ವೀಟಿದ್ದನಂತೆ. ಈಗ ಜನ ಅವನಿಗೆ ಮುತ್ತಿಕೊಳ್ಳತೊಡಗಿದ್ದಾರಂತೆ. ಇದನ್ನೇ ಹೇಳೋದು… ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಅಂತ..!

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin