ಮನೆಯ ಗೋಡೆ ಕೆಡವುತ್ತಿರುವಾಗ ಕೆಳಗೆ ಬಿದ್ದು ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಏ.21- ಮನೆಯ ಗೋಡೆ ಕೆಡವುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಮಂಡ್ಯ ನಗರದ ಕಳ್ಳಹಳ್ಳಿಯ ವಿವಿ ನಗರದಲ್ಲಿ ನಡೆದಿದೆ.ತಾಲೂಕಿನ ಹುಲಿಗೆರೆ ಗ್ರಾಮದ ರಾಮ (40) ಮೃತಪಟ್ಟ ಕಾರ್ಮಿಕ.ನಿನ್ನೆ ಸಂಜೆ ರಾಮ ಎಂಬುವರು ವರದರಾಜು ಅವರ ಹಳೆ ಮನೆ ಕೆಡವುತ್ತಿರುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಮಂಡ್ಯ ನಗರ ಪೊಲೀಸ್ ಠೃಆಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin