ವಿಜಯಪುರ : ಬೊಲೆರೋಗೆ 2 ಬೈಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Vijayapura-Accident--1
ವಿಜಯಪುರ, ಏ.21- ಬೊಲೆರೋ ವಾಹನಕ್ಕೆ ಎರಡು ಬೈಕ್‍ಗಳು ಡಿಕ್ಕಿ ಹೊಡೆದ ಪರಿಣಾಮ ಸಹೋದರರು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇಂಡಿ ತಾಲೂಕಿನ ಇಂಚಗೇರಿ ಗ್ರಾಮದ ಸಹೋದರರಾದ ಉಮೇಶ್ ಶಿವಣಗಿ (22) ಹಾಗೂ ಮಹೇಶ್ ಶಿವಣಗಿ (25) ಮೃತಪಟ್ಟವರು. ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ.



ನಿನ್ನೆ ಸಂಜೆ ಯಕ್ಕುಂಡಿ ಗ್ರಾಮದ ಬಳಿ ಬರುತ್ತಿದ್ದ ಮಹೀಂದ್ರ ಬುಲೆರೊ ವಾಹನಕ್ಕೆ ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಸಹೋದರರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Vijayapura-Accident--2

Vijayapura-Accident--3

Facebook Comments

Sri Raghav

Admin