ಹಣ ವಸೂಲಿ ಮಾಡುತ್ತಿದ್ದ ಎಎಸ್‍ಐ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.21- ನಗರದ ರಸ್ತೆ ಬದಿಯಲ್ಲಿ ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಿದ್ದ ಎಎಸ್‍ಐ ಒಬ್ಬರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.ನಗರದ ದೇವರಾಜ ಸಂಚಾರ ಠಾಣೆಯ ಎಎಸ್‍ಐ ರಂಗಸ್ವಾಮಿ ಅಮಾನತುಗೊಂಡವರು.ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಿರುವ ದೃಶ್ಯಗಳನ್ನು ವ್ಯಾಪಾರಿಯೊಬ್ಬರು ಸೆರೆ ಹಿಡಿದು ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತ ಸುಬ್ರಮಣ್ಯನ್‍ರಾವ್ ಇದರ ಕುರಿತು ತನಿಖೆಗೆ ಸೂಚಿಸಿದ್ದರು.  ತನಿಖೆ ನಡೆಸಿದ ಡಿಸಿಪಿ ರುದ್ರಮುನಿಯವರು ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದ್ದ ಹಣ ವಸೂಲಿ ಮಾಡುವ ದೃಶ್ಯಗಳ ಬಗ್ಗೆ ಆಯುಕ್ತರಿಗೆ ವರದಿ ನೀಡಿದ್ದು, ಅದರಲ್ಲಿ ಅವು ನೈಜವಾದವು ಎಂದು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಎಎಸ್‍ಐ ರಂಗಸ್ವಾಮಿಯನ್ನು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯನ್‍ರಾವ್ ಅಮಾನತು ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin