ಇಂಗ್ಲೆಂಡ್ ಕಂಪನಿಗಳಿಗೂ ವಂಚಿಸಿರುವ ವಿಜಯ್ ಮಲ್ಯ : ಇಡಿ ಬಳಿ ಪುರಾವೆ

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya

ನವದೆಹಲಿ, ಏ.22-ಇಂಗ್ಲೆಂಡ್‍ನಲ್ಲಿರುವ ಬ್ರಿಟಿಷ್ ಕಂಪನಿಗಳು ಮತ್ತು ಬ್ಯಾಂಕ್‍ಗಳಿಗೂ ವಿವಾದಾತ್ಮಕ ಉದ್ಯಮಿ ವಿಜಯ್ ಮಲ್ಯ ವಂಚಿಸಿರುವ ಪ್ರಕರಣಗಳ ದಾಖಲೆಗಳು ಜಾರಿ ನಿರ್ದೇಶನಾಲಯ (ಇಡಿ) ಬಳಿ ಇದ್ದು, ಕಳಂಕಿತ ಮದ್ಯದ ದೊರೆಯನ್ನು ಲಂಡನ್‍ನಿಂದ ಭಾರತಕ್ಕೆ ಕರೆತರಲು ಒಳ್ಳೆಯ ಅವಕಾಶ ಲಭಿಸಿದಂತಾಗಿದೆ.   ಭಾರತದ ಬ್ಯಾಂಕ್‍ಗಳಲ್ಲಿ ಭಾರೀ ಪ್ರಮಾಣದ ಹಣವನ್ನು ಮಲ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಇದೇ ಹಣದ ಮೂಲಕ ಯುನೈಟೆಡ್ ಕಿಂಗ್‍ಡಂನಲ್ಲಿರುವ ಬ್ರಿಟಿಷ್ ಕಂಪನಿಗಳು ಮತ್ತು ಬ್ಯಾಂಕ್‍ಗಳನ್ನೂ ಸಹ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಮ್ಮಲ್ಲಿ ಬಲವಾದ ಸಾಕ್ಷ್ಯಾಧಾರ ಒದಗಿಸುವ ದಾಖಲೆಗಳಿವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಈ ಪುರಾವೆಯನ್ನು ಇಂಗ್ಲೆಂಡ್ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಂಡಿದ್ದಾರೆ.ಐಡಿಬಿಐ ಸ್ಭೆರಿದಂತೆ ಹಲವಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ.ಗಳ ಸಾಲ ಪಡೆದು ವಂಚಿಸಿರುವ ಮಲ್ಯ ಈ ಹಣವನ್ನು ಅಕ್ರಮವಾಗಿ ಬ್ರಿಟಿಷ್‍ನ ಕಂಪನಿಗಳು ಮತ್ತು ಬ್ಯಾಂಕ್‍ಗಳಿಗೆ ನೀಡಿದ್ದಾರೆ. ಅಲ್ಲದೇ ಕೆಲವು ಅಲ್ಲಿನ ಕೆಲವು ಸಂಸ್ಥೆಗಳಿಗೂ ವಂಚಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಇಡಿ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ಕಡತಗಳನ್ನು ಇಂಗ್ಲೆಂಡ್‍ಗೆ ರವಾನಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಚಿಡಿಯಾ ಸೇರಿದಂತೆ 17 ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ 9,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಸಾಲದ ರೂಪದಲ್ಲಿ ಎತ್ತುವಳಿ ಮಾಡಿ ಉದ್ದೇಶಿತ ಸುಸ್ತಿದಾರರಾಗಿ ಲಂಡನ್‍ಗೆ ಪರಾರಿಯಾಗಿರುವ ಮಲ್ಯ ವಿರುದ್ಧ ಈಗಾಗಲೇ ಸಿಬಿಐ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಸಂಬಂಧ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಅಲ್ಲದೇ ಇದಕ್ಕೆ ಪುಷ್ಟಿ ನೀಡುವ ದಾಖಲೆಗಳ ಮಾಹಿತಿಯನ್ನು ಲಂಡನ್‍ನ ಉನ್ನತ ಅಧಿಕಾರಿಗಳೊಂದಿಗೆ ಹಂಚಿಕೊಂಡಿದೆ. ಈಗ ಮಲ್ಯರ ಮತ್ತಷ್ಟು ವಂಚನೆ ಪ್ರಕರಣಗಳ ಬಗ್ಗೆ ಇಡಿಗೆ ಮಹತ್ವದ ಸಾಕ್ಷ್ಯಾಧಾರಗಳು ಲಭಿಸಿರುವ್ಯದರಿಂದ ಕಳಂಕಿತ ಉದ್ಯಮಿಯನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಇನ್ನಷ್ಟು ತೀವ್ರಗೊಳ್ಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin