ಕೊಟ್ಟಿಗೆಗೆ ನುಗ್ಗಿ 30ಕ್ಕೂ ಹೆಚ್ಚು ಕುರಿಗಳನ್ನು ಕೊಂದು ಹಾಕಿದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

kolara

ಕೋಲಾರ,ಏ.22- ಆಹಾರ ಅರಸಿ ಬಂದಿದ್ದ ಎರಡು ಚಿರತೆಗಳು ಕೊಟ್ಟಿಗೆಗೆ ನುಗ್ಗಿ 30ಕ್ಕೂ ಹೆಚ್ಚು ಕುರಿಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ವೇಮಗಲ್ ಸಮೀಪದ ತೊಗಲಘಟ್ಟ ಗ್ರಾಮದಲ್ಲಿ ನಡೆದಿದೆ.ನರಸಿಂಹಪ್ಪ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ನಿನ್ನೆ ರಾತ್ರಿ ಚಿರತೆಗಳು ನುಗ್ಗಿ ಕುರಿಗಳ ಮೇಲೆ ದಾಳಿ ಮಾಡಿದ್ದು, 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಕಾಡುಪ್ರಾಣಿಗಳು ದಾಳಿ ಮಾಡುತ್ತಲೇ ಇವೆ. ಬರದ ಪರಿಸ್ಥಿತಿಯಲ್ಲಿ ಇಂಥ ಘಟನೆಗಳು ನಡೆದರೆ ನಮ್ಮ ಗತಿಯೇನು ಎಂದು ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನರಸಿಂಹಪ್ಪನವರಿಗೆ ಆಗಿರುವ ನಷ್ಟವನ್ನು ಭರಿಸಕೊಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin