ವಿದೇಶಿ ಹೂಡಿಕೆಗೆ ಭಾರತ ಕೇಂದ್ರಸ್ಥಾನ: ಸುಪ್ರೀಂ ಸಿಜೆ ನ್ಯಾ.ಖೇಹರ್ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Khehar--01

ನವದೆಹಲಿ,ಏ.22-ಭಾರತವು ವಿದೇಶಿ ಬಂಡವಾಳ ಹೂಡಿಕೆಗೆ ಅಂತಾರಾಷ್ಟ್ರೀಯ ಕೇಂದ್ರವಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಬಣ್ಣಿಸಿದ್ದಾರೆ. ರಾಜಧಾನಿಯಲ್ಲಿ ಇಂದಿನಿಂದ ಆರಂಭವಾಗಿರುವ ಏಷ್ಯಾ ಮಧ್ಯಸ್ಥಿಕೆ ಶೃಂಗಸಭೆಯಲ್ಲಿ ಮಾತನಾಡಿದ ಅವರು, ವಿದೇಶಿ ವಾಣಿಜ್ಯೋದ್ಯಮಿಗಳಲ್ಲಿ ವಿಶ್ವಾಸ ವೃದ್ದಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಅನಗತ್ಯ ಹಸ್ತಕ್ಷೇಪವು ವಾಣಿಜ್ಯೋದ್ಯಮ ಪ್ರಗತಿಗೆ ಉತ್ತೇಜನ ನೀಡಿದೆ ಎಂದರು.  ವಿದೇಶಿ ಬಂಡವಾಳ ಹೂಡಿಕೆಗಳಿಂದಾಗಿ ದೇಶದತ್ತ ಅಂತಾರಾಷ್ಟ್ರೀಯ ಸಂಸ್ಥೆಗಳ ಆಕರ್ಷಣೆ ಹೆಚ್ಚಾಗಿದೆ ಎಂದು ಹೇಳಿದರು.



ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯು ಹೊರಹೊಮ್ಮುತ್ತಿರುವ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರಗತಿಗೆ ಅತ್ಯಂತ ಪೂರಕವಾಗಿದೆ ಎಂದು ನ್ಯಾಯಮೂರ್ತಿ ಖೇಹರ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin