ಶೀಘ್ರದಲ್ಲೇ ಮೈಸೂರು-ಬೆಂಗಳೂರು ಜೋಡಿ ಮಾರ್ಗದಲ್ಲಿ ರೈಲು ಸಂಚಾರ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಮೈಸೂರು, ಏ.22- ಮೈಸೂರು-ಬೆಂಗಳೂರು ನಡುವಿನ ಜೋಡಿ ರೈಲು ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.  ಈ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶೇ.95ರಷ್ಟು ಪೂರ್ಣಗೊಂಡಿದ್ದು, ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮೇ ತಿಂಗಳಲ್ಲಿ ರೈಲು ಸುರಕ್ಷತಾ ಆಯೋಗದ ಸದಸ್ಯರು ಹಳ್ಳಿಗಳನ್ನು ಪರೀಕ್ಷಿಸಿ ವರದಿ ನೀಡಲಿದ್ದು, ನಂತರ ಮೈಸೂರು-ಬೆಂಗಳೂರು ನಡುವೆ ಜೋಡಿ ಮಾರ್ಗದಲ್ಲಿ ರೈಲುಗಳು ಸಂಚಾರ ಆರಂಭಿಸಲಿದೆ. ಶ್ರೀರಂಗಪಟ್ಟಣದ ರೈಲು ನಿಲ್ದಾಣದ ಬಳಿಯ ಟಿಪ್ಪುವಿನ ಶಸ್ತ್ರಾಗಾರದಿಂದಾಗಿ ಒಂದೂವರೆ ಕಿ.ಮೀ.ನಷ್ಟು ಬಾಕಿ ಉಳಿದಿದ್ದ ಕಾಮಗಾರಿ ಇದೀಗ ಪೂರ್ಣಗೊಳ್ಳುವ ಹಂತ ತಲುಪಿದೆ.



ಶಸ್ತ್ರಾಗಾರವನ್ನು ಸ್ಥಳಾಂತರಿಸಲಾಗಿದ್ದು, ಇದೀಗ ಅದು ಉತ್ತಮ ಸ್ಥಿತಿಯಲ್ಲಿದೆ. ಸಾವಿರ ಟನ್ ಶಸ್ತ್ರಗಾರವನ್ನು 130 ಮೀಟರ್ ದೂರಕ್ಕೆ ಸ್ಥಳಾಂತರಿಸಲಾಗಿದೆ. ಭೀಮ್‍ಗಳ ನೆರವಿನಿಂದ ಅಡಿಪಾಯಕ್ಕೆ ಹೊಸ ಕಂಬಗಳನ್ನು ಅಳವಡಿಸಲಾಗಿದ್ದು, ಕ್ಯೂರಿಂಗ್ ಕಾರ್ಯ 30 ದಿನದೊಳಗೆ ಪೂರ್ಣಗೊಳ್ಳಲಿದೆ. ನಂತರ ಶಸ್ತ್ರಾಗಾರ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin