ಸುಸೂತ್ರವಾಗಿ ನೆರವೇರಿದ ಹೊನ್ನಮ್ಮದೇವಿ ದೀಪೋತ್ಸವ 

ಈ ಸುದ್ದಿಯನ್ನು ಶೇರ್ ಮಾಡಿ

dabas-pete

ದಾಬಸ್‍ಪೇಟೆ, ಏ.22- ಶಿವಗಂಗೆಯಲ್ಲಿ ಶ್ರೀ ಹೊನ್ನಮ್ಮದೇವಿ ಜಾತ್ರಾ  ಮಹೋತ್ಸವದ ಅಂಗವಾಗಿ ಶ್ರೀ ಅಮ್ಮನವರ ದೀಪೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತುಬಿರು ಬಿಸಿಲಿನ ತಾಪಕ್ಕೆ ನದಿ, ಹೊಳೆ, ಕೆರೆ, ಹಳ್ಳ-ಕೊಳ್ಳಗಳು ಬತ್ತಿಹೊಗಿದ್ದರೂ ಶಿವಗಂಗೆಯ ಕಲ್ಯಾಣಿಯಲ್ಲಿ ನೀರಿದ್ದು, ದೀಪೋತ್ಸವ ಕ್ಕೆ ಯಾವುದೇ ಅಡಚಣೆಯಾಗದೆ ಸುಸೂತ್ರವಾಗಿ ನಡೆಯುತ್ತಿದೆ ಎಂದರೆ ಶಿವಗಂಗೆಯಲ್ಲಿ ನೆಲೆಸಿರುವ ಶ್ರೀ ಗಂಗಾಧರೇಶ್ವರ ಮತ್ತು ಹೊನ್ನಾದೇವಿ ಅಮ್ಮನವರ ಕೃಪೆ ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಶಿವಗಂಗೆಯ ಸುತ್ತಮುತ್ತಲೂ ಯಾವುದೇ ನದಿಗಳು ಹರಿಯುತ್ತಿಲ್ಲ. ಆದರೆ, ಶಿವಗಂಗೆಯಲ್ಲಿ ಹುಟ್ಟಿ ಹರಿಯುತ್ತಿದ್ದ ಕುಮುದ್ವತಿ ನದಿ ಇಂದು ಹೇಳ ಹೆಸರಿಲ್ಲದಂತಾಗಿದೆ. ಇದು ಮತ್ತೆ ಮತ್ತೆ ನೀರು ತುಂಬಿ ಹರಿಯಬೇಕು. ಈ ನಿಟ್ಟಿನಲ್ಲಿ ಅಂತರ್ಜಲ ವೃದ್ಧಿಸಲು ರೈತರು, ಜನ ಸಮುದಾಯ ಪ್ರಯತ್ನಿಸಬೇಕು ಎಂದರು.

ಸರಕಾರ ಈ ಬೆಟ್ಟವನ್ನು ಅಭಿವೃದ್ಧಿಪಡಿಸಿದರೆ ಮತ್ತಷ್ಟುಯಾತ್ರಿಕರನ್ನು ಪ್ರವಾಸಿಗರನ್ನು ಆಕರ್ಷಿಸಲುಅವಕಾಶವಾಗುತ್ತದೆ ಈ ನಿಟ್ಟಿನಲ್ಲಿಕ್ಷೇತ್ರದ ಸಂಸದರು ಶಾಸಕರು ಮುಂದಾಗಬೇಕುಎಂದರುದೀಪೋತ್ಸವ ದಲ್ಲಿ ಕ್ಷೇತ್ರಾಧಿಪತಿ ಶ್ರೀ ಗಂಗಾಧರೇಶ್ವರಸ್ವಾಮಿ ಮತ್ತು ಹೊನ್ನಮ್ಮದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಕಲ್ಯಾಣಿಯ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ. ಈ ಕಾರ್ಯಕ್ರಮ ರಾತ್ರಿ ವೇಳೆ ನಡೆಯುವುದರಿಂದ ವಿದ್ಯುತ್ ಅಲಂಕೃತವಾದ ದೀಪಗಳು ನೋಡುಗರ ಮನಸೆಳೆಯುತ್ತಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin