ದೆಹಲಿ ಮಹಾನಗರ ಪಾಲಿಕೆ ಚುನಾವಣೆ : ಬಿರುಸಿನ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ
Delhi chief minister Arvind Kejriwal after casting his vote with his family members at Rajpura Road polling station in New Delhi.
Delhi chief minister Arvind Kejriwal after casting his vote with his family members at Rajpura Road polling station in New Delhi.

ನವದೆಹಲಿ, ಏ.23-ದೇಶದ ಗಮನಸೆಳೆದಿರುವ ದೆಹಲಿ ಮಹಾನಗರ ಪಾಲಿಕೆಯ(ಎಂಸಿಡಿ) 272 ವಾರ್ಡ್‍ಗಳಿಗೆ ಇಂದು ವ್ಯಾಪಕ ಭದ್ರತೆಯೊಂದಿಗೆ ಮತದಾನ ನಡೆದಿದೆ. ಸಣ್ಣಪುಟ್ಟ ಅಹಿತಕರ ಘಟನೆ ಮತ್ತು ಮತಯಂತ್ರಗಳ ಗೊಂದಲದ ಹೊರತಾಗಿಯೂ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.  ಈ ಚುನಾವಣೆಯಲ್ಲಿ ಅಮ್ ಆದ್ಮಿ ಪಾರ್ಟಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದು ಮಹಾನಗರ ಪಾಲಿಕೆ ಮಟ್ಟದ ಚುನಾವಣೆಯಾಗಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ.   ದೆಹಲಿ ಮಹಾನಗರ ಪಾಲಿಕೆ ಸೇರಿದಂತೆ ಇಎಂಸಿಡಿ (ಪೂರ್ವ ದೆಹಲಿ ನಗರಪಾಲಿಕೆ), ಎಸ್‍ಎಂಸಿಡಿ(ದಕ್ಷಿಣ ದೆಹಲಿ ನಗರಪಾಲಿಕೆ) ಮತ್ತು ಎನ್‍ಎಂಸಿಡಿ(ಉತ್ತರ ದೆಹಲಿ ನಗರಪಾಲಿಕೆ) ವಾರ್ಡ್‍ಗಳಿಗೆ ನಡೆದ ಮತದಾನ ಬೆಳಗ್ಗೆಯಿಂದಲೇ ಬಿರುಸಾಗಿತ್ತು. ಉತ್ಸಾಹಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ರಾಜಧಾನಿಯಲ್ಲಿ 13,022 ಮತಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದ್ದು, 1.3 ಕೋಟಿ ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದಾರೆ. 3,284 ಮತಕೇಂದ್ರಗಳನ್ನು ಸೂಕ್ಷ್ಮ ಹಾಗೂ 1,464 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.   ನವದೆಹಲಿ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಷ್ ಸಿಸೊಡಿಯಾ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಸೇರಿದಂತೆ ಅನೇಕ ಗಣ್ಯರು ಬೆಳಗ್ಗೆ ಮತ ಚಲಾಯಿಸಿದ್ದಾರೆ.   ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಏ.26ರಂದು ಪ್ರಕಟಗೊಳ್ಳಲಿದ್ದು, ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin