ಬಾಂಬ್ ನಾಗನಿಗೆ 74 ಕೋಟಿ ದಂಡ..?

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು, ಏ.23-ಭಾರೀ ಪ್ರಮಾಣದ ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಕುಖ್ಯಾತ ರೌಡಿ, ಪಾಲಿಕೆ ಮಾಜಿ ಸದಸ್ಯ ನಾಗರಾಜ್ ಅಲಿಯಾಸ್ ಬಾಂಬ್ ನಾಗನಿಗೆ ನಿಯಮ ಉಲ್ಲಂಘನೆಗಾಗಿ ಭಾರೀ ದಂಡ ಬೀಳುವ ಸಾಧ್ಯತೆ ಇದೆ.   500 ಮತ್ತು 1000 ರೂ.ಗಳ ಹಳೆಯ ನೋಟು ಅಮಾನ್ಯಗೊಂಡ ನಂತರ ಕೇಂದ್ರ ಸರ್ಕಾರ ವಿಧಿಸಿರುವ ಕಾನೂನು ಪ್ರಕಾರ ಬಾಂಬ್ ನಾಗನಿಗೆ 74 ಕೋಟಿ ರೂ. ದಂಡ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.



ಕೇಂದ್ರ ಸರ್ಕಾರದ ನಿಯಮದ ಪ್ರಕಾರ 10ಕ್ಕಿಂತ ಹೆಚ್ಚು ಸಂಖ್ಯೆಯ ಹಳೆಯ ನೋಟುಗಳನ್ನು ಹೊಂದುವಂತಿಲ್ಲ. ಆದರೆ ಬಾಂಬ್ ನಾಗ ಕೋಟ್ಯಂತರ ರೂ.ಗಳ ಅಕ್ರಮ ಹಣ ಹೊಂದಿದ್ದ ಆರೋಪದ ಮೇಲೆ ಸಂಗ್ರಹದ 10 ಪಟ್ಟು ದಂಡ ವಿಧಿಸಲಾಗುತ್ತದೆ.   ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಶಾಮೀಲಾಗಿ ಕಾನೂನು ಕುಣಿಕೆಗೆ ಸಿಲುಕಿರುವ ನಾಗನಿಗೆ ಈ ಹೊಸ ಕಂಟಕ ಎದುರಾಗಿದೆ. ಬಾಂಬ್ ನಾಗ ಶನಿವಾರ ಅಜ್ಞಾತ ಸ್ಥಳದಿಂದ ಬಿಡಗುಡೆ ಮಾಡಿರುವ ವಿಡಿಯೋದಲ್ಲಿ ಮುಖ್ಯಮಂತ್ರಿಗಳ ಆಪ್ತ ಸಹಾಯಕ, ಪ್ರಭಾವಿ ರಾಜಕಾರಣಿಗಳು ಮತ್ತು ಉನ್ನತ ಹುದ್ದೆಯಲ್ಲಿರುವ ಐಪಿಎಸ್ ಅಧಿಕಾರಿಗಳ ಮೇಲೆ ಹೊಸ ಬಾಂಬ್ ಸಿಡಿಸಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin