ಮೈಸೂರು ಕುಕ್ಕರಳ್ಳಿ ಕೆರೆಯಲ್ಲಿ ಮೊಸಳೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Croco

ಮೈಸೂರು,ಏ.23– ನಗರದ ಕುಕ್ಕರಳ್ಳಿ ಕೆರೆಯಲ್ಲಿ ಇಂದು ಮೊಸಳೆಯ ಶವ ಪತ್ತೆಯಾಗಿದೆ.   ಇಂದು ಬೆಳಗ್ಗೆ ವಾಯು ವಿಹಾರಕ್ಕೆ ಸಾರ್ವಜನಿಕರು ಕುಕ್ಕರಳ್ಳಿಗೆ ತೆರಳಿದಾಗ ಮೊಸಳೆ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಭಯಗೊಂಡಿದ್ದಾರೆ. ಆದರೆ ಮೊಸಳೆಯ ಚಲನವಲನವಾಗದೇ ಇರುವುದರಿಂದ ಅದು ಸಾವನ್ನಪ್ಪಿರುವುದು ಗೊತ್ತಾಗಿದೆ.   ಕೂಡಲೇ ಸಾರ್ವಜನಿಕರು ಸೆಕ್ಯೂರಿಟಿ ಗಾರ್ಡ್‍ಗೆ ತಿಳಿಸಿದ್ದು , ಸೆಕ್ಯೂರಿಟಿ ಗಾರ್ಡ್ ಸಂಬಂಧಿಸಿದ ವಿವಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.   ಸ್ಥಳಕ್ಕೆ ಬಂದ ಅಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸತ್ತ ಮೊಸಳೆಯನ್ನು ಹೊರ ತೆಗೆದು ಶವ ಪರೀಕ್ಷೆಗೊಳಪಡಿಸಿದ್ದಾರೆ.

ಕೆರೆಯಲ್ಲಿ 4ರಿಂದ 5 ಮೊಸಳೆಗಳಿದ್ದು, ಈ ಪೈಕಿ ಒಂದು ಮೊಸಳೆ ಸಾವನ್ನಪ್ಪಿದ್ದು , ಕುಕ್ಕರಳ್ಳಿಕೆರೆಗೆ ಕಲುಷಿತ ನೀರು ಸೇರಿಕೊಂಡಿರುವುದರಿಂದ ಮೊಸಳೆ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.   ಶವ ಪರೀಕ್ಷೆಯ ವರದಿಯ ನಂತರವೇ ಕಾರಣ ಏನೆಂಬುದು ತಿಳಿದುಬರಲಿದೆ. ಕುಕ್ಕರಳ್ಳಿ ಕೆರೆಗೆ ಕೊಳಚೆ ನೀರು ಸೇರಿಸಬಾರದು ಎಂದು ಹಲವು ಬಾರಿ ಸ್ಥಳೀಯರು ಒತ್ತಾಯಿಸಿದರು.  ಈ ಹಿನ್ನೆಲೆಯಲ್ಲಿ ಸ್ವಚ್ಛ ಕಾರ್ಯ ಕೂಡ ಕೈಗೊಂಡಿದ್ದು , ಈ ನಡುವೆ ಮೊಸಳೆ ಸಾವನ್ನಪ್ಪಿರುವುದು ಬೇಸರದ ಸಂಗತಿ. ಕುಕ್ಕರಳ್ಳಿ ಕೆರೆಯನ್ನು ಮೊಸಳೆ ಪಾರ್ಕ್  ಮಾಡುವ ಯೋಜನೆಯಿತ್ತು. ಮುಂದಿನ ದಿನ ಹೇಗೆ ಎಂಬುದು ಸ್ಥಳೀಯರ ಆತಂಕವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin