ದಿವಂಗತ ಜಯಲಲಿತಾ ಅವರ ನೀಲಗಿರಿ ಎಸ್ಟೇಟ್ ಕಾವಲುಗಾರನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa--01

ಚೆನ್ನೈ, ಏ.24- ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾ ಅವರಿಗೆ ಸೇರಿದ ನೀಲಗಿರಿ ಜಿಲ್ಲೆಯ ಬಂಗಲೆಯ ಕಾವಲುಗಾರನನ್ನು ಕೊಲೆ ಮಾಡಲಾಗಿದೆ. 40 ವರ್ಷದ ಸೆಕ್ಯೂರಿಟಿ ಗಾರ್ಡ್‍ನ ಬಾಯಿಗೆ ಬಟ್ಟೆ ತುರುಕಿ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲ್ಲಲಾಗಿದ್ದು ತನಿಖೆ ಮುಂದುವರಿದಿದೆ.  ಉದಕಮಂಡಲದ (ಊಟಿ) ಕೊಡನಾಡ್ ಎಸ್ಟೇಟ್‍ನ ಬಂಗಲೆಯಲ್ಲಿ ಕಾವಲುಗಾರನಾಗಿದ್ದ ಓಂ ಬಹದ್ದೂರ್ ಕೊಲೆಯಾದ ಗಾರ್ಡ್. ಮತ್ತೊಬ್ಬ ಗಾರ್ಡ್ ಕಿಶೋರ್ ಬಹದ್ದೂರ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಬೆಲೆಬಾಳುವ ವಸ್ತುಗಳು ಮತ್ತು ದಾಖಲೆ ಪತ್ರಗಳನ್ನು ಕದ್ದು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಕಾರ್ಮಿಕರಿಗೆ ಈ ಸುದ್ದಿ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.



ಜಯಲಲಿತಾ ಆಗಾಗ ಈ ಬಂಗಲೆಗೆ ಭೇಟಿ ನೀಡಿ ವಿಶ್ರಾಂತಿ ಪಡೆಯುತ್ತಿದ್ದರು. ಎರಡು ಕಾರುಗಳಲ್ಲಿ ನಿನ್ನೆ ತಡರಾತ್ರಿ ಬಂದಿದ್ದ ದುಷ್ಕರ್ಮಿಗಳು ಬಂಗಲೆ ಪ್ರವೇಶಿಸುತ್ತಿದ್ದುದನ್ನು ನೋಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin