ದೇಶದಲ್ಲಿ ಮಕ್ಕಳ ರಕ್ಷಣೆ ನ್ಯಾಯ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಸತ್ಯಾರ್ಥಿ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Kailash-Satyarthi

ಕೊಲ್ಕತಾ, ಏ.24-ಮಕ್ಕಳನ್ನು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ತಡೆಗಟ್ಟಲು ದೇಶದಲ್ಲಿ ಮಕ್ಕಳ ರಕ್ಷಣೆ ನ್ಯಾಯ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಆಗ್ರಹಿಸಿದ್ದಾರೆ.  ಮಕ್ಕಳ ರಕ್ಷಣೆ ನ್ಯಾಯ ಕಾಯ್ದೆಯಡಿ ತುಂಬ ಸದೃಢ ಉಪ ನಿಯಮಗಳಿವೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ. ಈ ಕಾನೂನು ಮತ್ತು ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಸನ್ನಿವೇಶವೇ ಬದಲಾಗುತ್ತದೆ ಎಂದು ಸತ್ಯಾರ್ಥಿ ನಿನ್ನೆ ರಾತ್ರಿ ಸುದ್ದಿಗಾರಿಗೆ ತಿಳಿಸಿದರು.ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರಿಗೆ ಶಿಕ್ಷಣ ಮತ್ತು ಸಾಮಾಜಿಕ ಭದ್ರತೆ ನೀಡಬೇಕಾಗಿದೆ. ಇಂಥ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಇದರಿಂದ ಮಕ್ಕಳು ಜೀತದಾಳು, ವೇಶ್ಯಾವಾಟಿಕೆ ಅಥವಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗುವುದನ್ನು ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin