ನಗರ ಸಾರಿಗೆ ಬಸ್ ಡಿಕ್ಕಿ : ಸ್ನೇಹಿತರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

bus-accident

ಮೈಸೂರು, ಏ.24- ನಗರ ಸಾರಿಗೆ ಬಸ್ ರಸ್ತೆ ಬದಿ ನಿಂತಿದ್ದ ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬಾತ ಮೃತಪಟಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಸಿದ್ಧಾರ್ಥ ಸಂಚಾರಿ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತಪಟ್ಟ ವ್ಯಕ್ತಿಯ ಹೆಸರು ಸದ್ಯ ತಿಳಿದುಬಂದಿಲ್ಲ. ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ನಗರದ ಮೈಸೂರು- ಬನ್ನೂರು ರಿಂಗ್ ರಸ್ತೆ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಸ್ನೇಹಿತರು ಎದುರು ಬದುರಾಗಿದ್ದಾರೆ.

ಈ ವೇಳೆ ಇವರಿಬ್ಬರು ತಮ್ಮ ಬೈಕ್‍ಗಳಲ್ಲೇ ಕುಳಿತು ಕ್ಷೇಮ ಸಮಾಚಾರ ಮಾತನಾಡಿಕೊಳ್ಳುತ್ತಿದ್ದಾಗ, ಸಾತಗಳ್ಳಿ ಕಡೆಯಿಂದ ಬರುತ್ತಿದ್ದ ಬಸ್, ರಾಜೀವ್‍ನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಎಡಬದಿಗೆ ಬಸ್‍ನ್ನು ತೆಗೆದುಕೊಳ್ಳುತ್ತಿದ್ದಂತೆ ನಿಯಂತ್ರಣ ತಪ್ಪಿ ಪೆಟ್ಟಿಗೆ ಅಂಗಡಿಗೆ ಗುದ್ದಿ, ನಂತರ ಬೈಕ್‍ಗಳಿಗೆ ಡಿಕ್ಕಿಯಾದ ಪರಿಣಾಮ ಒಬ್ಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಸಿದ್ಧಾರ್ಥ ಠಾಣೆ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin