ಬಾಂಬ್ ನಾಗನ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಏ.27ಕ್ಕೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು, ಏ.24- ಹಳೇ ನೋಟುಗಳ ಬದಲಾವಣೆ, ಕಿಡ್ನ್ಯಾಪ್ ಪ್ರಕರಣದ ಆರೋಪಿಯಾಗಿ ತಲೆಮರೆಸಿಕೊಂಡಿರುವ ಬಾಂಬ್ ನಾಗ ಅಲಿಯಾಸ್ ವಿ.ನಾಗರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಸೆಷನ್ ಕೋರ್ಟ್ ಏ.27ಕ್ಕೆ ಮುಂದೂಡಿದೆ.  ನಾಗರಾಜ್ ಅವರ ಅರ್ಜಿ ವಿಚಾರಣೆ ನಡೆಸಿದ 21ನೆ ಸೆಷನ್ ನ್ಯಾಯಾಲಯ ವಿಚಾರಣೆಯನ್ನು 27ಕ್ಕೆ ಮುಂದೂಡಿತು.  ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ನಾಗರಾಜ್ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು, ಅವರ ಮೇಲೆ ಗುರುತರ ಆರೋಪಗಳಿವೆ. ಹಳೇ ನೋಟು ಬದಲಾವಣೆಗೆ ನನ್ನ ಬಳಿ ಬಂದಿದ್ದರು ಎಂದು ಹೇಳುವ ಮೂಲಕ ತಮ್ಮ ಮೇಲಿನ ತಪ್ಪನ್ನು ತಾವೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಜಾಮೀನು ನೀಡಬಾರದೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕೆಂಬಾವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.



ವಾದ-ವಿವಾದ ಆಲಿಸಿದ ನ್ಯಾಯಾಲಯ ಅರ್ಜಿಯನ್ನು 27ಕ್ಕೆ ಮುಂದೂಡಿದೆ. ಉದ್ಯಮಿಯೊಬ್ಬರ ಕಿಡ್ಯ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಪುರದಲ್ಲಿರುವ ಬಾಂಬ್‍ನಾಗ ನಿವಾಸದ  ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಕೋಟ್ಯಂತರ ರೂ. ಹಳೇ ನೋಟುಗಳು ಪತ್ತೆಯಾಗಿದ್ದವು.   ನಂತರ ಪೊಲೀಸರು ಹಲವು ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬಾಂಬ್ ನಾಗ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ಬಲೆ ಬೀಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin