ವರನಟನಿಗೆ ಡೂಡಲ್’ನಲ್ಲಿ ಗೌರವ ಅರ್ಪಿಸಿದ ಗೂಗಲ್

ಈ ಸುದ್ದಿಯನ್ನು ಶೇರ್ ಮಾಡಿ

Rajkumar--01

ಬೆಂಗಳೂರು, ಏ.24: ಕನ್ನಡಿಗರ ಆರಾಧ್ಯದೈವ, ನಟಸಾರ್ವಭೌಮ, ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಗೂಗಲ್ ಸಂಸ್ಥೆ ವಿಶೇಷ ಡೂಡಲ್ ಅನ್ನು ತನ್ನ ಸರ್ಚ್ ಇಂಜಿನ್ ನ ಮುಖಪುಟದಲ್ಲಿ ಹಾಕುವ ಮೂಲಕ ಗೌರವ ಸಮರ್ಪಿಸಿದೆ. ತೈಲವರ್ಣದಲ್ಲಿ ರಚಿಸುವಂತೆ ಕಾಣುವ ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಡೂಡಲ್ ನಲ್ಲಿ ಉಪಯೋಗಿಸಲಾಗಿದ್ದು, ಚಿತ್ರ ಮಂದಿರದ ತೆರೆಯ ಮೇಲೆ ಡಾ. ರಾಜ್ ಕುಮಾರ್ ಅವರ ಮೊಗ ಕಂಗೊಳಿಸುತ್ತಿರುವಂತೆ ರಚಿಸಲಾಗಿದೆ.



ಇಂದು (ಏಪ್ರಿಲ್ ೨೪) ವರನಟ ಡಾ. ರಾಜ್ ಕುಮಾರ್ ಅವರ 89ನೇ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಹಾಗೂ ವಿಶ್ವದೆಲ್ಲೆಡೆ ಇರುವ ಡಾ. ರಾಜ್ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಈ ಡೂಡಲ್ ಅನ್ನು ಕ್ಲಿಕ್ ಮಾಡಿದರೆ, ಡಾ. ರಾಜ್ ಕುಮಾರ್ ಅವರಿಗೆ ಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಹುದಾದ ವಿಕಿಪೀಡಿಯಾ ಲಿಂಕ್ ಗಳ ಪುಟ ತೆರೆದುಕೊಳ್ಳುತ್ತದೆ.  ವಿಶ್ವದಾದ್ಯಂತ ಅಣ್ಣಾವ್ರ ಅಭಿಮಾನಿಗಳಿಗೆ ಇಂದು ಸಂಭ್ರಮದ ದಿನವಾಗಿದ್ದು ಅವರು ನಮ್ಮೊಟ್ಟಿಗಿಲ್ಲದಿದ್ದರೂ, ನಮ್ಮೊಳಗೇ ಇದ್ದಾರೆ ಎಂದು ಪ್ರತಿಯೊಬ್ಬ ಕನ್ನಡಿಗನೂ ಅವರ ಬಗ್ಗೆ ಹೆಮ್ಮೆ ಪಡುತ್ತಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin