ಶುಕ್ರಯಾನ : ಬಾಹ್ಯಾಕಾಶ ಪ್ರಯೋಗಕ್ಕೆ ಇಸ್ರೋದಿಂದ ಪ್ರಸ್ತಾವನೆಗಳ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ISRo--01

ಬೆಂಗಳೂರು/ನವದೆಹಲಿ, ಏ.24-ಸೌರಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರ ಗ್ರಹಕ್ಕೆ (ವೀನಸ್) ಯಾನ ಕೈಗೊಳ್ಳುವ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಚಾಲನೆ ನೀಡಿದೆ. ಇದಕ್ಕಾಗಿ ಅಂತರಿಕ್ಷ ಪ್ರಯೋಗಗಳನ್ನು ನಡೆಸಲು ದೇಶದ ವಿಜ್ಞಾನಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.  ಇಸ್ರೋ ಪ್ರಕಾರ, ಶುಕ್ರಗ್ರಹದತ್ತ ಪ್ರಯಾಣ ಬೆಳಸಲಿರುವ ಉಪಗ್ರವು 500 ವ್ಯಾಟ್ ಶಕ್ತಿಯೊಂದಿಗೆ 175 ಕೆಜಿ ತೂಕ ಹೊಂದಿರಲಿದೆ. ಶುಕ್ರ ಗ್ರಹದ ಸುತ್ತ 500 x 60,000 ಕಿ.ಮೀ. ಕಕ್ಷೆಯ ಪ್ರದಕ್ಷಿಣೆ ಹಾಕುವ ಅಂತರಿಕ್ಷ ಯಾನ ಇದಾಗಿದ್ದು, ಹಲವಾರು ತಿಂಗಳು ಬೇಕಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಕೈಗೊಳ್ಳಬೇಕಾದ ಪ್ರಯೋಗ-ಪರೀಕ್ಷೆಗಳನ್ನು ನಡೆಸಲು ನೆರವಾಗುವಂತೆ ವಿಜ್ಞಾನಿಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿದೆ.



ಏಕಕಾಲದಲ್ಲಿ 104 ಉಪಗ್ರಹಗಳನ್ನು ನಭಕ್ಕೆ ಉಡ್ಡಯನ ಮಾಡಿ, ಕೆಂಪು ಗ್ರಹಕ್ಕೆ ಮಂಗಳಯಾನ ಕೈಗೊಂಡು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಇಸ್ರೋ ಈ ಬಾರಿ ಶುಕ್ರನ ಮೇಲೆ ಪ್ರಯೋಗಕ್ಕೆ ಮುಂದಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ.   ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿರುವ ಇಸ್ರೋ, ಈಗ ಜಗತ್ತಿನ ಬಾಹ್ಯಾಕಾಶ ಸಂಶೋಧನ ಕ್ಷೇತ್ರದ ದಿಗ್ಗಜ ಸಂಸ್ಥೆಯಾಗಿದೆ. ಇದೇ ಕಾರಣಕ್ಕಾಗಿ ಶುಕ್ರಯಾನದ ಮಹತ್ವದ ಯೋಜನೆ ಕೈಗೊಳ್ಳಲು ಇಸ್ರೋಗೆ ನೇತೃತ್ವ ವಹಿಸುವ ಮಹತ್ವಾಕಾಂಕ್ಷಿ ಯೋಜನೆಗೆ ವಿಶ್ವದ ಮುಂಚೂಣಿ ದೇಶಗಳು ಮುಂದೆ ಬಂದಿವೆ. ಶುಕ್ರಯಾನವು ಬಹು ಶತಕೋಟಿ ಡಾಲರ್ ಯೋಜನೆಯಾಗಿದ್ದು, 2020ರಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಇದೆ.   ಮಂಗಳಯಾನದಂತೆಯೇ ಈ ಯೋಜನೆಯನ್ನು ಯಶಸ್ವಿಗೊಳಿಸಲು ಇಸ್ರೋ ಸಜ್ಜಾಗಿದ್ದು, ಪ್ರಮುಖ ರಾಷ್ಟ್ರಗಳು ಸಹಕಾರ ನೀಡಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin