ಮಿಷನ್ 150 ಬದಲಿಗೆ ಬಿಜೆಪಿಯಿಂದ ಈಗ ಟಾರ್ಗೆಟ್ 175ಗೆ ರಣತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

bjp

ಬೆಂಗಳೂರು, ಏ.25-ಮುಂದಿನ ವಿಧಾನಸಭೆ ಚುನಾ ವಣೆಗೆ ಕಾಂಗ್ರೆಸ್-ಜೆಡಿಎಸ್ ಏನೇ ಹೊರ-ಒಳ ಒಪ್ಪಂದ ಮಾಡಿಕೊಂಡರೂ ಇದನ್ನು ಸವಾಲಾಗಿ ಸ್ವೀಕರಿಸಿ ಮಿಷನ್ 150 ಬದಲಿಗೆ ಮಿಷನ್ 175ಗೆ ರಣತಂತ್ರ ರೂಪಿಸಲಿದ್ದೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.ನಿನ್ನೆ ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಆತ್ಮೀಯತೆ ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಚುನಾವಣಾ ಪೂರ್ವ ಎರಡೂ ಪಕ್ಷಗಳು ಒಂದಾದರೂ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ಸುದ್ದಿಗೋಷ್ಟಿಯಲ್ಲಿ ಹೇಳಿದರು. ಎರಡು ಪಕ್ಷಗಳು ಯಾವುದೇ ರೀತಿ ಒಪ್ಪಂದ ಮಾಡಿಕೊಂಡರೂ ಬಿಜೆಪಿಯ ಮಿಷನ್ 150ಗೆ ಅಡ್ಡಿಯಾವುದಿಲ್ಲ. ಹಾಗೊಂದು ವೇಳೆ ಮೈತ್ರಿ ಏರ್ಪಟ್ಟರೆ ನಮ್ಮ ಕಾರ್ಯತಂತ್ರ ಬದಲಾಗಲಿದೆ ಎಂದರು.ನಿನ್ನೆ ಸಿದ್ದರಾಮಯ್ಯ ಅವರು ಮೂರು ಸಂದೇಶಗಳನ್ನು ರವಾನಿಸಿದ್ದಾರೆ. ನನ್ನನ್ನು ದಲಿತ ಮುಖ್ಯಮಂತ್ರಿ ಮುಂದಿಟ್ಟುಕೊಂಡು ಆಟವಾಡಲು ನೋಡಿದರೆ ದೇವೆಗೌಡರ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಸಿದ್ಧ ಎಂಬ ಸಂದೇಶವನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‍ಗೆ ರವಾನಿಸಿದ್ದಾರೆ. ಪಕ್ಷದಲ್ಲಿ ನಿಮ್ಮ ಮಾತಿಗೆ ಯಾವುದೇ ಬೆಲೆಯಿಲ್ಲ. ಮೈತ್ರಿ ಸರ್ಕಾರವಾದರೆ ನಾನು ರೇವಣ್ಣ ಜತೆಗೂ ಸರ್ಕಾರ ರಚಿಸಲು ಸಿದ್ಧ ವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೂ ಮತ್ತೊಂದು ಸಂದೇಶ ರವಾನಿಸಿದ್ದಾರೆ.  ದೇಹ ಎರಡು ಮನಸ್ಸು ಒಂದೇ ಎನ್ನುತ್ತಿದ್ದ ಸಿದ್ದರಾಮಯ್ಯ ಅಧಿಕಾರದ ಆಸೆಗಾಗಿ ನಾನು ಯಾರ ಜತೆಗಾದರೂ ಹೋಗಲು ಸಿದ್ಧವೆಂಬ ಎಚ್ಚರಿಕೆಯನ್ನು ಕಾಂಗ್ರೆಸ್‍ಗೆ ರವಾನಿಸಿದ್ದಾರೆ ಎಂದು ದೂರಿದರು.

ಶ್ವೇತಪತ್ರ ಹೊರಡಿಸಲಿ:

ಮಾಜಿ ಸಚಿವ ಸೋಮಶೇಖರ್ ಮಾತನಾಡಿ, ಕಳೆದ 4 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಎಷ್ಟು ಭೂಮಿ ಹಂಚಿದ್ದಾರೆ ಎಂಬುದನ್ನು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ಚುನಾವಣೆ ಬಂದಿರುವ ಕಾರಣ ಜನರನ್ನು ದಿಕ್ಕು ತಪ್ಪಿಸಲು ಉಚಿತವಾಗಿ ಭೂಮಿ ಹಂಚುತ್ತಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ. ಮತದಾರರು ಇಂತಹ ಆಮಿಷಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಒಂದು ಲಕ್ಷ ಒಂಭತ್ತು ಸಾವಿರ ಎಕರೆ ಬಗರ್ ಹುಕುಂ ಜಮೀನನ್ನು ವಿಲೇವಾರಿ ಮಾಢುವುದಾಗಿ ಸರ್ಕಾರ ಹೇಳುತ್ತಿದೆ. 1974ರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಭೂಮಿ ರೈತರಿಗೆ ಇದನ್ನು ನೀಡಲಾಗುವುದೆಂದು ಸರ್ಕಾರ ಹೇಳುತ್ತಿದೆ. ವಾಸ್ತವವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಈ ಭೂಮಿಯನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದರು.ಜಮೀನನ್ನು ವಿಲೇವಾರಿ ಮಾಡುವುದಾದರೆ ಸಂವಿಧಾನ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ದ್ವಿಸದಸ್ಯ ಪೀಠಕ್ಕೆ ಬದಲಾಗಿ ಪಂಚಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕೆಂದು ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin