ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ‘ಅನಿಲಭಾಗ್ಯ’ ಯೋಜನೆ ಮೇ 1ರಿಂದ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

LPG-Villages

ಬೆಂಗಳೂರು,ಏ.25-ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಬಡತನ ರೇಖೆಗಿಂತ (ಬಿಪಿಎಲ್) ಕುಟುಂಬಗಳಿಗೆ ನೀಡುವ ಅನಿಲಭಾಗ್ಯ ಯೋಜನೆ ಮೇ 1ರಿಂದ ಜಾರಿಯಾಗಲಿದೆ.
ಕಳೆದ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಒದಗಿಸುವ ಅನಿಲ ಭಾಗ್ಯ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದರಂತೆ ಮೇ 1ರಿಂದ ರಾಜ್ಯಾದ್ಯಂತ ಈ ಯೋಜನೆ ಅನುಷ್ಠಾನವಾಗಲಿದ್ದು , ಮೊದಲ ಸುತ್ತಿನಲ್ಲಿ ಐದು ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದಾರೆ.  ರಾಜ್ಯವನ್ನು ಸೀಮೆಎಣ್ಣೆ ಮುಕ್ತ ಮಾಡುವ ಮೊದಲ ಹಂತದಲ್ಲಿ ಬಿಪಿಎಲ್ ಕುಟುಂಬಗಳಿಗೆ ರಾಜ್ಯ ಸರ್ಕಾರ ಸುಮಾರು ಎರಡು ಸಾವಿರ ವೆಚ್ಚದಲ್ಲಿ ಗ್ಯಾಸ್ ಸಂಪರ್ಕವನ್ನು ಒದಗಿಸಲಿದೆ.ಕೇಂದ್ರ ಸರ್ಕಾರದ ಉಜ್ವಲ ಭವಿಷ್ಯ ಯೋಜನೆ ಮಾದರಿಯಲ್ಲೇ ಅನಿಲಭಾಗ್ಯ ಅನುಷ್ಠಾನವಾಗಲಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ.   ಮೊದಲ ಹಂತದಲ್ಲಿ ಐದು ಲಕ್ಷ ಕುಟುಂಬಗಳಿಗೆ ನಂತರ ಹಂತ ಹಂತವಾಗಿ ಒಟ್ಟು 18 ಲಕ್ಷ ಕುಟುಂಬಗಳಿಗೆ ಇದರ ಪ್ರಯೋಜನ ದೊರಕಲಿದೆ. ಈಗಾಗಲೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎನ್ನಲಾಗಿದೆ.

ಅನಿಲಭಾಗ್ಯ ಯೋಜನೆಯಿಂದ ಸರ್ಕಾರಕ್ಕೆ ಸುಮಾರು 25 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಇದನ್ನು ಸರಿದೂಗಿಸಲು ಮುಂದಿನ ತಿಂಗಳಿನಿಂದ ಫಲಾನುಭವಿಗಳಿಗೆ ಸಕ್ಕರೆ, ಗೋಧಿ ಇಲ್ಲವೇ ರಾಗಿ ಕಡಿತ ಮಾಡಲು ಸರ್ಕಾರ ತೀರ್ಮಾನಿಸಿದೆ.   ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅನ್ನಭಾಗ್ಯ ಯೋಜನೆಗೆ ವರ್ಷಕ್ಕೆ ಎರಡು ಸಾವಿರ ಕೋಟಿ ಅಗತ್ಯವಿರುವ ಕಾರಣ ಅನಿಲಭಾಗ್ಯ ಯೋಜನೆಯಿಂದ ಮತ್ತೊಂದು ಹೊರೆಯಾಗುವುದನ್ನು ತಪ್ಪಿಸಲು ಪಡಿತರ ಧಾನ್ಯ ಪೂರೈಕೆಯಲ್ಲಿ ಕಡಿತ ಮಾಡುವ ಸಂಭವವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin