ಹಾಂಕಾಂಗ್‍ನಲ್ಲಿ ಮೂಲೆಗುಂಪಾಗುತ್ತಿರುವ ಮೂನ್‍ಕೇಕ್

ಈ ಸುದ್ದಿಯನ್ನು ಶೇರ್ ಮಾಡಿ

amaz

ವಿಶ್ವದೆಲ್ಲೆಡೆ ಈಗ ಬೊಜ್ಜು ರೋಗದ ಸಮಸ್ಯೆ. ನಾವು ಸೇವಿಸುವ ಆಹಾರಗಳೂ ಇದಕ್ಕೆ ಕೊಡುಗೆ ನೀಡುತ್ತವೆ. ಚೀನಾದಲ್ಲಿ ಶಿಶಿರಋತುವಿನಲ್ಲಿ ಸಾಂಪ್ರದಾಯಿಕವಾಗಿ ಬಳಸುವ ಮೂನ್‍ಕೇಕ್ ಬಹಳ ರುಚಿಕರ ಆಹಾರ. ಆದರೆ ಇದು ಸ್ಥೂಲಕಾಯಕ್ಕೆ ಎಡೆ ಮಾಡಿಕೊಡುತ್ತದೆ. ಇದೇ ಕಾರಣಕ್ಕಾಗಿ ಸಾಂಪ್ರದಾಯಿಕ ಆಹಾರಕ್ಕೆ ಆರೋಗ್ಯ ಕಾಳಜಿಯೊಂದಿಗೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಮೂನ್‍ಕೇಕ್-ಚೀನಾದ ಜನಪ್ರಿಯ ಸಾಂಪ್ರದಾಯಿಕ ಆಹಾರ. ಶಿಶಿರ ಋತುವಿನಲ್ಲಿ ಪೌರ್ಣಮಿ ಸಂದರ್ಭದಲ್ಲಿ ಇದನ್ನು ಚೀನಿಯರು ಹೆಚ್ಚಾಗಿ ಸೇವಿಸುತ್ತಾರೆ. ಸಾಕಷ್ಟು ಸಕ್ಕರೆ, ಮೊಟ್ಟೆ ಇತ್ಯಾದಿ ಕ್ಯಾಲೋರಿ ಹೆಚ್ಚು ಮಾಡುವ ಕೊಬ್ಬು ಪದಾರ್ಥಗಳು ಇದರಲ್ಲಿ ಸಮೃದ್ಧವಾಗಿರುತ್ತದೆ.ಈಗ ಬೊಜ್ಜು ರೋಗ ದೊಡ್ಡ ಸಮಸ್ಯೆ. ಅದಕ್ಕಾಗಿಯೇ ಹಾಂಕಾಂಗ್‍ನ ಒಂದು ರೆಸ್ಟೋರೆಂಟ್ ಈ ಸಾಂಪ್ರದಾಯಿಕ ಮೂನ್‍ಕೇಕ್‍ನ ರುಚಿ ಮತ್ತು ನೋಟಕ್ಕೆ ಧಕ್ಕೆ ಬರದ ರೀತಿಯಲ್ಲಿ ಆರೋಗ್ಯ ಕಾಳಜಿ ಲೇಪ ನೀಡಿದೆ. ಹಾಂಕಾಂಗ್‍ನ ಬಾಣಸಿಗಳಾದ ಶಿಮಾ ಶಿಮಿಝು ಸಕ್ಕರೆ, ಮೊಟ್ಟೆ, ಲೋಟಸ್ ಪೇಸ್ಟ್ ಇತ್ಯಾದಿ ಬದಲಿಗೆ ತೆಂಗಿನ ಹಾಲು, ಎಳ್ಳು ಬೀಜಗಳು ಇತ್ಯಾದಿ ಆರೋಗ್ಯಕರ ಪದಾರ್ಥಗಳೊಂದಿಗೆ ಮೂನ್‍ಕೇಕ್ ತಯಾರಿಸಿ ಗಮನ ಸೆಳೆದಿದ್ದಾಳೆ. ಇದು ಸಾಂಪ್ರದಾಯಿಕ ಕೇಕ್‍ಗಿಂತ ಯಾವುದೇ ರೀತಿಯಲ್ಲೂ ಭಿನ್ನವಾಗಿಲ್ಲ. ಆರೋಗ್ಯ ಕಾಳಜಿ-ಕಳಕಳಿಯೊಂದಿಗೆ ಈ ವಿಶಿಷ್ಟ ಪರ್ಯಾಯ ಮೂನ್‍ಕೇಕ್‍ಗಳನ್ನು ತಯಾರಿಸಲಾಗಿದೆ ಎನ್ನುತ್ತಾಳೆ ಶಿಮಾ. ಈ ಆರೋಗ್ಯ ಪರ್ಯಾಯದ ಮೂನ್‍ಕೇಕ್‍ಗೆ ಅಪಾರ ಬೇಡಿಕೆ ಬರುತ್ತಿದೆ. ಆರೋಗ್ಯ ಕಾಳಜಿ, ರುಚಿ ಮತ್ತು ಆಕರ್ಷಣೆ ಇವೆಲ್ಲವೂ ಇರುವ ಈ ಆಹಾರವನ್ನು ಗ್ರಾಹಕರೂ ಬಹುವಾಗಿ ಮೆಚ್ಚಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin