ಕುದುರೆ ಏರಿ ಹೊರಟ ಮಧುಮಗ ಕಾಲ್ನಡಿಗೆಯಲ್ಲಿ ಮಂಟಪ ಸೇರಿದ..!

ಈ ಸುದ್ದಿಯನ್ನು ಶೇರ್ ಮಾಡಿ

Groom--012

ಮುಂಬೈ,ಏ.26– ಕುದುರೆ ಮೇಲೆ ಮಧುಮಗ ಏರಿ ಸವಾರಿ ಹೊರಾಟಗ ನಿಯಂತ್ರಣಕ್ಕೆ ಸಿಗದ ಕುದುರೆ ರಂಪಾಟ ನಡೆಸಿ ಬಹುದೂರ ಓಡಿರುವ ಘಟನೆ ಮಹಾರಾಷ್ಟ್ರದ ಅಹಮದಾನಗರದಲ್ಲಿ ನಡೆದಿದೆ.   ತಾಳೆ ಕಟ್ಟುವ ಮುನ್ನ ಮಧುಮಗನನ್ನು ಕುದುರೆ ಮೇಲೆ ಕೂರಿಸಿ ಮೆರವಣಿಗೆ ಹೊರಡುವುದು ಸಂಪ್ರದಾಯ. ಇದರಂತೆ ಅಹಮದಾನಗರದದ ಮದುವೆಯೊಂದರಲ್ಲಿ ಮಧುಮಗ ಕುದುರೆ ಏರಿ ಹೊರಟ್ಟಿದ್ದೇ ತಡ ಸವಾರನ ನಿಯಂತ್ರಣಕ್ಕೊಳಗಾಗದೆ ರಂಪಾಟ ನಡೆಸಿ ನಾಗಾಲೋಟವಾಗಿ ಓಡಿದೆ.



ಮಧುಮಗನವರ ಕಡೆಯವರೆಲ್ಲ ಗಾಬರಿಯಿಂದ ಕುದುರೆ ಹಿಂದೆ ಬಹುದೂರ ಓಡಿ ಹೈರಾಣಾದರು. ಅಂತಿಮವಾಗಿ ಕುದರೆಯಿಂದ ಕೆಳಗೆ ಬಿದ್ದ ಮಧುಮಗ ಕಾಲ್ನಡಿಗೆಯಲ್ಲಿ ಕಲ್ಯಾಣ ಮಂಟಪ ಸೇರಿದ. ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin