ಕೃಷಿ ಆದಾಯದ ಮೇಲೆ ತೆರಿಗೆಗೆ ನೀತಿ ಆಯೋಗ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Neeti-Ayog

ನವದೆಹಲಿ, ಏ.26 – ತೆರಿಗೆ ವಂಚನೆಯನ್ನು ತಪ್ಪಿಸುವ ಉದ್ದೇಶದಿಂದ ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ನೀತಿ ಆಯೋಗ ಬೆಂಬಲ ಸೂಚಿಸಿದೆ. ತೆರಿಗೆ ಆಧಾರವನ್ನು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿ ನಿರ್ದಿಷ್ಟ ಹಂತದ ನಂತರ ಕೃಷಿ ವರಮಾನದ ಮೇಲೆ ತೆರಿಗೆ ವಿಧಿಸುವ ಹಾಗೂ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯನ್ನು ತೆಗೆದುಹಾಕುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ದೊಡ್ಡಮಟ್ಟದ ತೆರಿಗೆ ವಂಚಕರಿಂದ ರೈತರನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ. ತೆರಿಗೆ ವಂಚನೆಯಿಂದ ಜಾರಿಕೊಳ್ಳಲು ತಮ್ಮ ಮೂಲವನ್ನು ಕೃಷಿ ಎಂದು ಘೋಷಿಸಿಕೊಳ್ಳುತ್ತಿರುವ ಅನೇಕ ಕೃಷಿಯೇತರರನ್ನು ಈ ವ್ಯಾಪ್ತಿಗೆ ಒಳಪಡಿಸುವುದು ಸಹ ಇದರ ಉದ್ದೇಶವಾಗಿದೆ.


ಕಡಿಮೆ ಕೃಷಿ ವರಮಾನದ ಸೋಗಿನಲ್ಲಿ ಕೆಲವು ಶ್ರೀಮಂತ ರೈತರು ಭಾರೀ ಪ್ರಮಾಣದಲ್ಲಿ ತೆರಿಗೆ ವಂಚಿಸುತ್ತಿರುವುದು ಕಂಡುಬಂದಿದೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಸರ್ಕಾರ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಇಂತಿಷ್ಟು ಆದಾಯದ ಮೇಲೆ ಅವರನ್ನು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ.   ಅಲ್ಲದೇ ಸೋವಿಯತ್ ಶೈಲಿಯ ಯೋಜನಾ ಆಯೋಗದ ಪಂಚವಾರ್ಷಿಕ ಯೋಜನೆಯಲ್ಲೂ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಲು ನೀತಿ ಆಯೋಗವು ಕೇಂದ್ರಕ್ಕೆ ಶಿಫಾರಸು ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin