ಚಿನ್ನಾಭರಣ ಪಾಲಿಷ್ ನೆಪದಲ್ಲಿ ಚಿನ್ನಾಭರಣ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು.ಏ.26-ಪಾಲಿಷ್ ನೆಪದಲ್ಲಿ ಮಹಿಳೆಯೊಬ್ಬಳು ವೃದ್ಧೆಯ ಚಿನ್ನಾಭರಣ ಕಳವು ಮಾಡಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹೂಟಗಳ್ಳಿ ನಿವಾಸಿ ಇಂದ್ರಮ್ಮ(58) ನಿನ್ನೆ ಹೂಟಗಳ್ಳಿಯ ಸಂತೆಗೆ ಬಂದಿದ್ದಾಗ ಅಪರಿಚಿತ ಮಹಿಳೆ ಪರಿಚಯ ಮಾಡಿಕೊಂಡು ಚಿನ್ನಾಭರಣ ಪಾಲಿಷ್ ಮಾಡಿಕೊಡುತ್ತೇನೆ ಎಂದು ಹೇಳಿದಾಗ ಇದನ್ನು ನಂಬಿದ ಇಂದ್ರಮ್ಮ 65 ಗ್ರಾಂ ತೂಕದ ಮಾಂಗಲ್ಯ ಸರ ಬಿಚ್ಚಿಕೊಟ್ಟಿದ್ದಾರೆ. ಬಳಿಕ ಸ್ಪಲ್ಪ ಹೊತ್ತು ಇಲ್ಲೇ ಇರಿ ಬರುತ್ತೇನೆ ಎಂದು ಹೇಳಿ ಸರ ತೆಗೆದುಕೊಂಡು ಹೋದ ಮಹಿಳೆ ಹಿಂದಿರುಗಿ ಬಂದಿಲ್ಲ. ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin