ನೀರೆಂದು ಆ್ಯಸಿಡ್ ಕುಡಿದ ವೃದ್ಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Acid--00

ಬೆಳಗಾವಿ,ಏ.26- ನೀರೆಂದು ಭಾವಿಸಿ ಆ್ಯಸಿಡಿ ಸೇವಿಸಿದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳವಟ್ಟಿ ಗ್ರಾಮದ ಕೋಮಣ್ಣ ನಲವಡೆ (64) ಮೃತಪಟ್ಟ ವೃದ್ಧ. ಗ್ರಾಮದಲ್ಲಿನ ಕೋಳಿಫಾರಂನಲ್ಲಿ ಕೆಲಸ ಮಾಡುವಾಗ ಬಿಸ್ಲರಿ ನೀರಿನ ಬಾಟೆಲ್‍ನಲ್ಲಿ ಇರಿಸಿದ್ದ ಆ್ಯಸಿಡ್‍ನ್ನು ನೀರೆಂದು ಭಾವಿಸಿ ಕುಡಿದಿದ್ದಾರೆ.



ಇದರಿಂದ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin