ಫೇಸ್‍ಬುಕ್‍ ಲೈವ್ ವಿಡಿಯೋದಲ್ಲಿ 11 ತಿಂಗಳ ಸ್ವಂತ ಮಗಳನ್ನೇ ಕೊಂದು ಕ್ರೂರಿ ತಂದೆ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Facebook-Live

ಬ್ಯಾಂಕಾಕ್, ಏ.26-ಥೈಲೆಂಡ್‍ನ ಕ್ರೂರ ವ್ಯಕ್ತಿಯೊಬ್ಬ ತನ್ನ 11 ತಿಂಗಳ ಪುತ್ರಿಯನ್ನು ತಾನೇ ಕೊಂದು ಹಾಕುವ ಭೀಭತ್ಸ ದೃಶ್ಯಗಳ ಎರಡು ವಿಡಿಯೋ ತುಣುಕುಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿ ಸಾವಿಗೆ ಶರಣಾದ ಘಟನೆಯೊಂದು ನಡೆದಿದೆ. ಮಗುವಿನ ಹತ್ಯೆಯ ವಿಡಿಯೋಗಳು ಆತನ ಫೇಸ್‍ಬುಕ್‍ನಲ್ಲಿ 24 ತಾಸುಗಳು ಲಭ್ಯವಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆ ವೇಳೆ ಭೀಕರ ದೃಶ್ಯಗಳ ವಿಡಿಯೋವನ್ನು ತೆಗೆದು ಹಾಕಲಾಯಿತು.


ಈ ಕ್ರೂರಿ ತಂದೆಯ ಥೈಲೆಂಡ್‍ನ ಪುಕೇತ್ ದ್ವೀಪ ಪಟ್ಟಣದ ನಿರ್ಜನ ಕಟ್ಟಡವೊಂದರಲ್ಲಿ ಮಗುವಿನ ಕೊರಳಿಗೆ ಹಗ್ಗ ಕಟ್ಟಿ ಮೇಲ್ಛಾವಣಿಯಿಂದ ನೇತು ಹಾಕುತ್ತಿರುವ ದೃಶ್ಯಗಳು ವಿಡಿಯೋದಲ್ಲಿದೆ. ಆತನ ಆತ್ಮಹತ್ಯೆ ಬಗ್ಗೆ ಪೇಸ್‍ಬುಕ್‍ನಲ್ಲಿ ಮಾಹಿತಿ ಇಲ್ಲ. ಆದರೆ ಮಗಳ ಸಮೀಪವೇ ಆತನ ಶವ ಪತ್ತೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin