ಬೆಂಗಳೂರಲ್ಲಿ ಹಾಲ್ಕೋವಾ ತಿಂದು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Milk-Product

ಬೆಂಗಳೂರು,ಏ.26- ಹಾಲ್ಕೋವಾ ಸಿಹಿ ತಿಂದು ಅಸ್ವಸ್ಥಗೊಂಡಿರುವ 20ಕ್ಕೂ ಹೆಚ್ಚು ಮಕ್ಕಳಿಗೆ ಫುಡ್ ಪಾಯಿಸನ್ ಆಗಿರಬಹುದೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಶೇಷಾದ್ರಿಪುರದ ಕಾಲೋನಿಯೊಂದರಲ್ಲಿ ನಿನ್ನೆ ಸಿಹಿ ತಿಂದು ವಾಂತಿಯಾಗಿ ಒಬ್ಬರನಂತರ ಒಬ್ಬರಂತಯೆ 21 ಮಂದಿ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. 15 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಾಲ್ಕು ಮಕ್ಕಳಿಗೆ ಇನ್‍ಫೆಕ್ಷನ್ ಹೆಚ್ಚಾಗಿರುವ ಕಾರಣ ಚಿಕಿತ್ಸೆ ಮುಂದುವರೆಸಲಾಗಿದೆ. ಇದಲ್ಲದೆ ಇಬ್ಬರನ್ನು ಇಂದಿರಾಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರವಿಕುಮಾರ್ ತಿಳಿಸಿದ್ದಾರೆ.



ಮಕ್ಕಳು ಸೇವಿಸಿರುವ ಸಿಹಿ ತಿಂಡಿ ಮಾರಾಟ ಮಾಡಿದ ಮಳಿಗೆಯನ್ನು ಸೀಜ್ ಮಾಡಿ ಸಿಹಿ ಶಾಂಪಲ್ ಅನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin