ಜಿಹಾದ್ ಹೆಸರಲ್ಲಿ ರಕ್ತಪಾತಕ್ಕಾಗಿ ಒಗ್ಗೂಡಿದ ಉಗ್ರ ಸಂಘಟನೆಗಳು : ದಾಳಿ ಎದುರಿಸಲು ಸೇನೆಗೆ ಸೂಚನೆ..!

ಈ ಸುದ್ದಿಯನ್ನು ಶೇರ್ ಮಾಡಿ

Terrorist--001

ನವದೆಹಲಿ, ಏ.27-ಹಿಂಸಾಚಾರಗಳ ಮೂಲಕ ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ), ಹಿಜ್‍ಬುಲ್ ಮುಜಾಹಿದ್ದೀನ್ (ಎಚ್‍ಎಂ) ಹಾಗೂ ಜೈಷ್-ಎ-ಮಹಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಗಳು ಮತ್ತೆ ಭಾರೀ ರಕ್ತಪಾತಕ್ಕಾಗಿ ಯುನೈಟೆಡ್ ಜಿಹಾದ್ (ಸಂಯುಕ್ತ ಧರ್ಮಯುದ್ಧ) ಹೆಸರಿನಲ್ಲಿ ಒಗ್ಗೂಡಿವೆ.   ಇದೇ ವೇಳೆ ಸಂಭವನೀಯ ಉಗ್ರರ ಹಿಂಸಾಚಾರ ಮತ್ತು ದಾಳಿಗಳನ್ನು ನಿಗ್ರಹಿಸಲು ಸರ್ವಸನ್ನದ್ಧವಾಗಿರುವಂತೆ ಭದ್ರತಾಪಡೆಗಳಿಗೆ ಗೃಹ ಸಚಿವಾಲಯ ಸೂಚನೆ ನೀಡಿದೆ.ಸೇನಾ ಬೇಹುಗಾರಿಕೆಗೆ ಲಭಿಸಿರುವ ಮಾಹಿತಿಯಂತೆ, ಈ ಮೂರೂ ಬಣಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳನ್ನು ತೀವ್ರಗೊಳಿಸಲು ನಿರ್ಧರಿಸಿವೆ. ಇದಕ್ಕಾಗಿ ಪರಸ್ಪರ ಮಾಹಿತಿಗಳು, ರಹಸ್ಯ ಸಂದೇಶಗಳು, ಶಸ್ತ್ರಾಸ್ತ್ರ-ಮದ್ದುಗುಂಡುಗಳು ಹಾಗೂ ಉಗ್ರರನ್ನು ವಿನಿಮಯ ಮಾಡಿಕೊಳ್ಳುತ್ತಿವೆ.   ಕಾಶ್ಮೀರ ಕಣಿವೆ ಸೇರಿದಂತೆ ದೇಶದ ಪ್ರಮುಖ ಭಾಗಗಳಲ್ಲಿ ಶಾಂತಿ ಕದಡಿ ರಕ್ತಪಾತವನ್ನು ನಡೆಸಲು ಈ ಮೂರು ಗುಂಪುಗಳು 16 ವರ್ಷಗಳ ನಂತರ ಇದೇ ಮೊದಲ ಬಾರಿ ಒಗ್ಗೂಡಿವೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಅಲ್ಲದೆ, ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳ ಮದರಸಾಗಳಿಂದ ವಿದ್ಯಾರ್ಥಿಗಳನ್ನು ಯುನೈಟೆಡ್ ಜಿಹಾದ್‍ಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಕಾಶ್ಮೀರ ವಿವಿಧ ನಗರಗಳ ವಿದ್ಯಾರ್ಥಿಗಳನ್ನು ತಮ್ಮ ಸಂಘಟನೆಗೆ ಸೇರಿಸಿಕೊಂಡು ಅವರಲ್ಲಿ ಕೋಮುವಾದದ ವಿಷಬೀಜ ಬಿತ್ತಲಾಗುತ್ತಿದೆ. ಕಣಿವೆ ರಾಜ್ಯದಲ್ಲಿ ಇತ್ತೀಚೆಗೆ ಭುಗಿಲೆದ್ದ ಹಿಂಸಾಚಾರಕ್ಕೆ ಈ ಸಂಘಟನೆಗಳು ಕುಮ್ಮಕ್ಕು ನೀಡಿರುವುದು ಸಾಬೀತಾಗಿದೆ.

ಕಾಶ್ಮೀರದಲ್ಲಿ 300ಕ್ಕೂ ಹೆಚ್ಚು ಉಗ್ರರು ಸಕ್ರಿಯವಾಗಿದ್ದಾರೆ. ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನಗಳು ಇವೆ ಎಂಬುದನ್ನು ಗುಪ್ತಚರ ಇಲಾಖೆ ಎರಡು ದಿನಗಳ ಹಿಂದಷ್ಟೇ ಬಹಿರಂಗಗೊಳಿಸಿತ್ತು. ಇದರ ಬೆನ್ನಲ್ಲೇ 30 ಭಯೋತ್ಪಾದರು ಗೋಪ್ಯ ಸ್ಥಳದಲ್ಲಿ ಎಕೆ-47 ರೈಫಲ್‍ಗಳನ್ನು ಹಿಡಿದು ಜಿಹಾದ್ ಪರ ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿತ್ತು.

ಲಷ್ಕರ್-ಎ-ತೊಯ್ಬಾ, ಹಿಜ್‍ಬುಲ್ ಮುಜಾಹಿದ್ದೀನ್, ಹಾಗೂ ಜೈಷ್-ಎ-ಮಹಮದ್ ಈ ಭಯೋತ್ಪಾದನೆ ಸಂಘಟನೆಗಳು 2001ರಲ್ಲಿ ಒಟ್ಟಿಗೆ ಸೇರಿ ಭಾರತದಲ್ಲಿ ಭಾರೀ ಪ್ರಮಾಣದ ಹಿಂಸಾಚಾರ ನಡೆಸಿದ್ದವು. ಆದರೆ ಇವುಗಳ ನಡುವಣ ಭಿನ್ನಾಭಿಪ್ರಾಯದಿಂದ ಪ್ರತ್ಯೇಕಗೊಂಡಿದ್ದವು. ಈಗ ಮತ್ತೆ ಪರಸ್ಪರ ಕೈಜೋಡಿಸಿ ಭಾರೀ ವಿಚ್ಛಿದ್ರಕಾರಿ ಕೃತ್ಯಗಳನ್ನು ನಡೆಸಲು ಹುನ್ನಾರ ನಡೆಸಿವೆ. ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಬಂದೆರಗಬಹುದಾದ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿರುವಂತೆ ಭದ್ರತಾಪಡೆಗಳಿಗೆ ಕೇಂದ್ರ ಗೃಹ ಸಚಿವಾಲಯ ಸ್ಷಷ್ಟ ಸೂಚನೆ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin