ದುಷ್ಕರ್ಮಿಗಳು ವಿಷವಿಟ್ಟು ಕೊಂದಿದ್ದ ಕೋತಿಗಳ ತಿಥಿಕಾರ್ಯ ಮಾಡಿದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

Pandavapura--01

ಪಾಂಡವಪುರ,ಏ.27- ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ 25ಕ್ಕೂ ಹೆಚ್ಚು ಕೋತಿಗಳ ಮಾರಣ ಹೋಮ ನಡೆದ ಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಿ ಇದೀಗ ಉತ್ತರ ಕ್ರಿಯಾಧಿ ಭೂಶಾಂತಿ (ತಿಥಿ ಕಾರ್ಯ) ನಡೆಸಲಾಯಿತು.  ತಾಲೂಕಿನ ಪಟ್ಟಣಗೇರಿ ಸಮೀಪವಿರುವ ಕಣಿವೆ ಬೋರಪ್ಪನ ದೇವಸ್ಥಾನದ ಬೆಟ್ಟದಲ್ಲಿ ಮನುಷ್ಯರು ಸತ್ತಾಗ ನಡೆಸುವ ವಿಧಿ ವಿಧಾನದಂತೆಯೇ 27 ಕೋತಿಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ಮಾಡಿದ್ದ ಸ್ಥಳದಲ್ಲಿ ಉತ್ತರ ಕ್ರಿಯಾಧಿ ವೇಳೆ ಕೆರೆತೊಣ್ಣೂರು, ಪಟ್ಟಣಗೇರಿ, ದೇಶವಳ್ಳಿ ಹಾಗೂ ಶಂಕನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ನಡೆಸಿಕೊಟ್ಟರು.


ಪುರೋಹಿತರ ಸಹಕಾರದೊಂದಿಗೆ 11 ದಿನದ ನಂತರ ಹಾಲು-ತುಪ್ಪ ಸುರಿದು ಬಗೆ ಬಗೆಯ ತಿಂಡಿ-ತಿನಿಸುಗಳನ್ನು ಮಾಡಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಗಮಿಸಿದ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, ದುಷ್ಕರ್ಮಿಗಳು 27ಕೋತಿಗಳನ್ನು ಕೊಂದು 11 ದಿನಗಳಾದರೂ ಈವರೆಗೆ ಆರೋಪಿಗಳನ್ನು ಪತ್ತೆ ಹಚ್ಚಿಲ್ಲವೇಕೆ? ನೀವು ಹಣ ಪಡೆದು ಮೌನವಹಿಸಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

Pandavapura--02

ಕೋತಿಗಳನ್ನು ಕೊಂದ ದುಷ್ಕರ್ಮಿಗಳ ಪತ್ತೆಗಾಗಿ ಸುಮಾರು ಐದು ತಂಡಗಳನ್ನು ರಚಿಸಲಾಗಿದೆ. ಜತೆಗೆ ಪಶು ವೈದ್ಯರಿಂದ ಕೋತಿಗಳ ಮರಣೋತ್ತರ ಪರೀಕ್ಷೆ ಕೂಡ ನಡೆಸಿದ್ದು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆ ವರದಿ ಬಂದ ನಂತರ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುತ್ತದೆ. ಎಂದು ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin