ಬ್ಲಾಕ್ ಅಂಡ್ ವೈಟ್ ದಂಧೆ : 12 ಲಕ್ಷರೂ. ಹಳೇ ನೋಟು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.27- ಅಮಾನ್ಯಗೊಂಡಿರುವ ನೋಟುಗಳನ್ನಿಟ್ಟುಕೊಂಡು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದ ಹೊಟೇಲ್‍ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಆರು ಮಂದಿಯನ್ನು ಬಂಧಿಸಿ 12 ಲಕ್ಷ ರೂ. ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.ಬೆಟ್ಟಗಳ್ಳಿ ನಿವಾಸಿ ಅಬ್ದುಲ್ ಲತೀಫ್, ದಿನೇಶ್, ತಮಿಳುನಾಡಿನ ಆದಿಶೇಷ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನಜರ್ ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಟೇಲ್‍ವೊಂದರಲ್ಲಿ ಆರೋಪಿಗಳು ರೂಂವೊಂದನ್ನು ಬಾಡಿಗೆ ಪಡೆದು ಹಳೆ ನೋಟುಗಳನ್ನಿಟ್ಟುಕೊಂಡು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಪಡೆದು ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರೋಪಿಗಳು 20 ರಿಂದ 40ರಷ್ಟು ಕಮಿಷನ್ ಪಡೆದು ಹಳೆ ನೋಟಿಗೆ ಹೊಸ ನೋಟನ್ನು ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ 12 ಲಕ್ಷ ರೂ. ಹಳೆ ನೋಟು ಸಹಿತ ಆರು ಮಂದಿಯನ್ನು ಬಂಧಿಸಿದ್ದು, ಇವರಿಂದ ಹೊಸ ನೋಟು ಪಡೆದವರು ಯಾರೆಂಬುದು ತಿಳಿದುಬಂದಿಲ್ಲ. ತನಿಖೆಯಿಂದ ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin