ಅಫ್ಘನ್ ಭದ್ರತಾ ಪಡೆಗಳ ಮೇಲೆ ಭಯಾನಕ ದಾಳಿ ನಡೆಸುವುದಾಗಿ ತಾಲಿಬಾನ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Taliban--01

ಕಾಬೂಲ್/ಇಸ್ಲಾಮಾಬಾದ್, ಏ.28-ಅಫ್ಘನ್ ಭದ್ರತಾ ಪಡೆಗಳು ಮತ್ತು ಮಿತ್ರ ಕೂಟಗಳ ಮೇಲೆ ಭಯಾನಕ ದಾಳಿಯನ್ನು ತೀವ್ರಗೊಳಿಸುವುದಾಗಿ ಘೋಷಿಸಿರುವ ತಾಲಿಬಾನ್ ಉಗ್ರರು, ದೇಶದಲ್ಲಿ ತಮ್ಮ ರಾಜಕೀಯ ನೆಲೆಯನ್ನು ನಿರ್ಮಿಸುವುದಾಗಿಯೂ ಪ್ರಕಟಿಸಿದ್ದಾರೆ.   ಅಫ್ಭನ್ ಭದ್ರತಾ ಪಡೆಗಳ ಮೇಲೆ ಆಕ್ರಮಣ ಆರಂಭಿಸಿರುವುದಾಗಿ ತಾಲಿಬಾನ್ ವಕ್ತಾರ ಜಬೀಉಲ್ಲಾ ಮುಜಾಹೀದ್ ಈ-ಮೇಲ್ ಹೇಳಿಕೆಯೊಂದರಲ್ಲಿ ಘೋಷಿಸಿದ್ದಾರೆ. ಆಫ್ಘಾನಿಸ್ತಾನದ ಅರ್ಧಕ್ಕಿಂತ ಹೆಚ್ಚು ಭಾಗದ ಮೇಲೆ ತಾಲಿಬಾನಿಗಳು ಪ್ರಾಬಲ್ಯ ಹೊಂದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಅಫ್ಘನ್ ದೇಶದಲ್ಲಿ ತಮ್ಮ ರಾಜಕೀಯ ನೆಲೆಗಳು ಮತ್ತು ಸಂಘಟನೆಗಳನ್ನು ನಿರ್ಮಾಣ ಮಾಡುವುದಾಗಿ ಬಂಡುಕೋರರಿಗೆ ತಾಲಿಬಾನ್ ಭರವಸೆ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin