ಅಶ್ಲೀಲ ವೆಬ್‍ಸೈಟ್‍ಗೆ ವಿದ್ಯಾರ್ಥಿಗಳ ಫೋಟೋ ಅಪ್‍ಲೋಡ್ ಪ್ರಕರಣ : ಮೈಸೂರು ವಿವಿ ವಿದ್ಯಾರ್ಥಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Crime--01-Sex

ಮೈಸೂರು, ಏ.28- ಅಶ್ಲೀಲ ವೆಬ್‍ಸೈಟ್‍ಗೆ ವಿದ್ಯಾರ್ಥಿಗಳ ಫೋಟೋ ಅಪ್‍ಲೋಡ್ ಮಾಡಿದ್ದ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಮೈಸೂರು ವಿವಿಯ ಪರಿಸರ ವಿಜ್ಞಾನ ವಿಭಾಗದ ಜಯಂತ್ ಕುಮಾರ್ ಬಂಧಿತ ವಿದ್ಯಾರ್ಥಿ.  ಪ್ರತಿಭಾವಂತ ವಿದ್ಯಾರ್ಥಿಯಾದ ಜಯಂತ್‍ಕುಮಾರ್ ಮೂರು ಸೆಮಿಸ್ಟರ್‍ಗಳಲ್ಲೂ ಹೆಚ್ಚಿನ ಅಂಕಗಳಿಸಿದ್ದು, ಇಂಟರ್‍ನಲ್ಸ್‍ನಲ್ಲೂ ಹೆಚ್ಚಿನ ಅಂಕ ಪಡೆದಿದ್ದಾನೆ.ಇದರಿಂದ ಕೆಲ ವಿದ್ಯಾರ್ಥಿನಿಯರು ವಿಭಾಗದ ಸಹಪ್ರಾಧ್ಯಾಪಕ ದೇವಿಪ್ರಸಾದ್ ಅವರನ್ನು ಓಲೈಸಿ ಹೆಚ್ಚು ಅಂಕ ಪಡೆದಿರುವುದಾಗಿ ಜಯಂತ್‍ನನ್ನು ರೇಗಿಸಿದ್ದರು ಎನ್ನಲಾಗಿದೆ. ಅಲ್ಲದೆ, ಇತ್ತೀಚೆಗೆ ನಡೆದ ಫನ್‍ವೀಕ್ ಕಾರ್ಯಕ್ರಮದಲ್ಲೂ ಜಯಂತ್ ಹಾಗೂ ಈತನ 8 ಜನ ಸ್ನೇಹಿತರನ್ನು ವಿದ್ಯಾರ್ಥಿನಿಯರ ಗುಂಪು ದೂರ ಇರಿಸಿತ್ತು ಎನ್ನಲಾಗಿದೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಕೋಪಕಾರುತ್ತಿದ್ದ ಜಯಂತ್ ಕೆಲ ವಿದ್ಯಾರ್ಥಿನಿಯರ ಫೋಟೋ ಹಾಗೂ ವಿವರಗಳನ್ನು ಅಶ್ಲೀಲ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

ಅಶ್ಲೀಲ ವೆಬ್‍ಸೈಟ್‍ನಲ್ಲಿ ವಿದ್ಯಾರ್ಥಿನಿಯರ ಫೋಟೋ ಹಾಗೂ ವಿವರ ಅಪ್‍ಲೋಡ್ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin