ಈಶ್ವರಪ್ಪ ವಿರುದ್ಧ ರುದ್ರೇಗೌಡ-ಆಯನೂರು-ರೇಣುಕಾ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-01

ಶಿವಮೊಗ್ಗ, ಏ.28- ಬೆಂಗಳೂರಿನಲ್ಲಿ ನಡೆದ ಬಿಜೆಪಿ ಉಳಿಸಿ ಸಮಾವೇಶದಲ್ಲಿ ಶಿವಮೊಗ್ಗದಿಂದ ಪಾಲ್ಗೊಂಡ ವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಹೇಳಿದ್ದಾರೆ.  ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಹಾಗಾದರೆ ಶಿವಮೊಗ್ಗ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಈಶ್ವರಪ್ಪ ವರ್ತಿಸಿದ್ದುದು ಸರ್ವಾಧಿಕಾರಿಯಂತಿರಲಿಲ್ಲವೇ? ಎಂದು ವಾಗ್ದಾಳಿ ನಡೆಸಿದರು.ನಗರದಲ್ಲಿ ಪಕ್ಷದ ಕಚೇರಿ ಇದ್ದರೂ ಮನೆಯಲ್ಲಿ ಸಭೆ ನಡೆಸಿದ್ದು ಏತಕ್ಕಾಗಿ? ಜಿಲ್ಲಾಪಂಚಾಯತ್ ಚುನಾವಣೆ, ಪಾಲಿಕೆ ಚುನಾವಣೆಯಲ್ಲಿ ಈಶ್ವರಪ್ಪ ಮಾಡಿದ್ದಾದರೂ ಏನು ಎಂದು ಟೀಕಿಸಿದ್ದಾರೆ. ಶಿವಮೊಗ್ಗದಿಂದ ಬಿಜೆಪಿ ಉಳಿಸಿ ಸಮಾವೇಶಕ್ಕೆ ಸಾಕಷ್ಟು ಜನ ಹೋಗಿದ್ದಾರೆ. ಇದರ ಬಗ್ಗೆ ವರದಿ ತರಿಸಿಕೊಂಡು ಪಕ್ಷದ ಜಿಲ್ಲಾ ವರಿಷ್ಠರ ಸಭೆಯಲ್ಲಿ ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ರುದ್ರೇಶ್‍ಗೌಡ ತಿಳಿಸಿದರು.
ನನ್ನ ವಿರುದ್ಧ ಗಿರೀಶ್ ಪಟೇಲ್ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ. ಅವರ ಹೇಳಿಕೆಗಳನ್ನು ಕಾರ್ಯಕರ್ತರು ನಂಬಬಾರದು ಎಂದು ಮನವಿ ಮಾಡಿದರು.

ಈಶ್ವರಪ್ಪ ಕೊಡುಗೆ ಏನು?:

ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ನವರ ಕೊಡುಗೆ ಏನು? ಬಿಗ್ರೇಡ್‍ಗೂ ನನಗೂ ಸಂಬಂಧವಿಲ್ಲ ಎಂಬುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಬ್ರಿಗೇಡ್ ಚಟುವಟಿಕೆ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರು ಕೇವಲ ಬಿ.ಎಸ್.ಯಡಿಯೂರಪ್ಪ ಒಬ್ಬರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಉಪಚುನಾವಣೆಯ ಸೋಲಿನ ಹೊಣೆಯನ್ನು ಬಿಎಸ್‍ವೈ ತಲೆಗೆ ಕಟ್ಟಲು ಗೊಂದಲ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಕುತಂತ್ರ ನಡೆದಿದೆ ಎಂದು ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಈಶ್ವರಪ್ಪನವರು ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು. ತಾಕತ್ತಿದ್ದರೆ ಜಿಲ್ಲೆಯಲ್ಲಿ ಎರಡು ಕ್ಷೇತ್ರದಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ರೇಣುಕಾಚಾರ್ಯ ವಾಗ್ದಾಳಿ:

ಆಯನೂರು ಮಂಜುನಾಥ್, ರುದ್ರೇಗೌಡ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ಇತ್ತ ದಾವಣಗೆರೆಯಲ್ಲೂ ಮಾಜಿ ಸಚಿವ ರೇಣುಕಾಚಾರ್ಯ ಈಶ್ವರಪ್ಪ ಕುರಿತು ಟೀಕಾ ಪ್ರಹಾರ ನಡೆಸಿದ್ದಾರೆ.  ಈಶ್ವರಪ್ಪ ಬಗ್ಗೆ ನನಗೆ ಗೌರವವಿದೆ. ಶಿವಮೊಗ್ಗದ ಕೆಲ ಎರಡನೆ ಹಂತದ ನಾಯಕರು ಬಿ.ಎಸ್.ಯಡಿಯೂರಪ್ಪ ವಿರುದ್ದ ಈಶ್ವರಪ್ಪನವರನ್ನು ಮುಂದಿಟ್ಟುಕೊಂಡು ಪಿತೂರಿ ನಡೆಸಿದ್ದಾರೆ ಎಂದು ಟೀಕಿಸಿದರು.  ಸಂತೋಷ್ ಅವರು ಯಡಿಯೂರಪ್ಪ ಕುರಿತು ಮುಖ್ಯಮಂತ್ರಿಯಾಗಲು ಪ್ರಯತ್ನ ನಡೆಸಿದ್ದಾರೆ. ಇದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಗುಂಡ್ಲುಪೇಟೆ-ನಂಜನಗೂಡಿನಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲಲು ಸಂತೋಷ್ ಬೆಂಬಲಿಗರೇ ಕಾರಣ ಎಂದು ರೇಣುಕಾಚಾರ್ಯ ಆರೋಪಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin