ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಂ.ಬಿ.ಪಾಟೀಲ್ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

M.B.Patil

ಬೆಂಗಳೂರು, ಏ.28- ಕೆಪಿಸಿಸಿ ಅಧ್ಯಕ್ಷಗಾದಿಯ ಗುದ್ದಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತೆರೆಮರೆಯಲ್ಲೇ ಈ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿರುವ ನಡುವೆಯೇ ಪ್ರಸ್ತುತ ಇರುವ   ಅಧ್ಯಕ್ಷರನ್ನು ಉಳಿಸಿಕೊಳ್ಳಲು ಒಂದು ಬಣ ಯತ್ನಿಸುತ್ತಿದೆ. ಅದರಲ್ಲೂ ಪರಮೇಶ್ವರ್ ಅವರನ್ನು ಈ ಸ್ಥಾನದಲ್ಲಿ ಮುಂದುವರೆಸಲು ಬಣ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ.  ಆದರೆ ಉತ್ತರ ಕರ್ನಾಟಕದವರಿಗೆ ಈ ಸ್ಥಾನ ನೀಡಬೇಕೆಂದು ಹೇಳುತ್ತಿರುವ ಸಚಿವ ಎಂ.ಬಿ.ಪಾಟೀಲ್ ಕೆಪಿಸಿಸಿ ಗದ್ದುಗೆಗಾಗಿ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೂ ತೆರಳಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗದವರು ಮತ್ತು ಲಿಂಗಾಯತ ಸಮುದಾಯದವರಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆ ಮಂಡಿಸಲು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದ್ದು, ಈ ಭಾಗದ ಹಾಗೂ ಲಿಂಗಾಯತ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಆಗುವ ಲಾಭದ ವಿವರವನ್ನು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡಲು ಎಂ.ಬಿ.ಪಾಟೀಲ್ ಮುಂದಾಗಿದ್ದಾರೆ. ಹೈಕಮಾಂಡ್ ಅಧ್ಯಕ್ಷ ಸ್ಥಾನ ಬದಲಾವಣೆಯ ಚಿಂತನೆ ನಡೆಸುತ್ತಿದ್ದಂತೆ ಒಂದು ಬಣ ಪರಮೇಶ್ವರ್ ಅವರನ್ನು ಉಳಿಸಿಕೊಳ್ಳಲು ಮುಂದಾಗಿದ್ದರೆ, ಮತ್ತೊಂದು ಬಣ ಡಿ.ಕೆ.ಶಿವಕುಮಾರ್ ಬಗ್ಗೆ ಒಲವು ತೋರಿದೆ.

ಇಂತಹ ಬೆಳವಣಿಗೆಗಳ ನಡುವೆ ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.  ಹೈಕಮಾಂಡ್ ಯಾವ ನಿರ್ಧಾರ ತಳೆಯಲಿದೆ, ಯಾರಿಗೆ ಅಧ್ಯಕ್ಷ ಪಟ್ಟ ಸಿಗಲಿದೆ ಎನ್ನುವ ಗೊಂದಲ ಇನ್ನು ಮುಂದುವರೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin